ದಿನದಲ್ಲಿ ೪ ಗಂಟೆಗಳ ಕಾಲ ಸಂಚಾರವಾಣಿ ಉಪಯೋಗಿಸುವ ಪೋಷಕರಲ್ಲಿ ಸಿಡುಕುತನದಲ್ಲಿ ಹೆಚ್ಚಳ ! -ಕೆನಡಾದಲ್ಲಿನ ಸಂಶೋಧನೆಯಲ್ಲಿನ ನಿಷ್ಕರ್ಷ

ಶೇಕಡ ೭೫ ಪೋಷಕರಲ್ಲಿ ನಿರಾಸೆ !

ವಾಟರ್ಲೂ (ಕೆನಡಾ) – ಇಲ್ಲಿಯ ವಾಟರ್ಲೂ ವಿದ್ಯಾಪೀಠದ ಸಂಶೋಧಕರಿಂದ ಮಾಡಲಾದ ಸಂಶೋಧನೆಯಲ್ಲಿ ಸಂಚಾರ ವಾಣಿ ಮತ್ತು ಇತರ ಡಿಜಿಟಲ್ ಉಪಕರಣಗಳು ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಉಪಯೋಗಿಸುವ ಪೋಷಕರು ಅವರ ಮಕ್ಕಳ ಜೊತೆ ವರ್ತಿಸುವುದರಲ್ಲಿ ಬದಲಾವಣೆ ಕಂಡು ಬಂದಿದೆ. ಈ ಸಂಶೋಧನೆಗಾಗಿ ಸಂಶೋಧಕರು ೫ ರಿಂದ ೧೮ ವಯಸ್ಸಿನ ೨ ಮಕ್ಕಳ ಇರುವ ೫೪೯ ಪೋಷಕರ ಸಮೀಕ್ಷೆ ಮಾಡಿದ್ದಾರೆ. ಈ ಸಂಶೋಧನೆ ಕೋರೋನ ಕಾಲದಲ್ಲಿ ಮಾಡಲಾಗಿದೆ. ಇದರಲ್ಲಿ ಡಿಜಿಟಲ್ ಮಾಧ್ಯಮಗಳ ಉಪಯೋಗ ಹೆಚ್ಚಾಗಿರುವುದು ಕಂಡು ಬಂದಿದೆ.

೧. ಯಾವ ಪೋಷಕರು ಬಿಡುವಿನ ಸಮಯದಲ್ಲಿ ಅಥವಾ ವಿಶ್ರಾಂತಿಯ ಸಮಯದಲ್ಲಿ ಫೋನ್ ಅಥವಾ ಇತರ ಡಿಜಿಟಲ್ ಮಾಧ್ಯಮದ ಸಂಪರ್ಕದಲ್ಲಿ ಇರುತ್ತಾರೆ ಅವರು ಅವರ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಸಣ್ಣ ಸಣ್ಣ ವಿಷಯಕ್ಕೂ ಕೋಪ ಬಂದು ಕಿರಿಚಾಡುತ್ತಾರೆ.

೨. ಸಂಚಾರವಾಣಿ ಮತ್ತು ಇತರ ಡಿಜಿಟಲ್ ಉಪಕರಣಗಳ ಉಪಯೋಗ ಮಾಡುವ ಪೋಷಕರು ಶೇಕಡ ೭೫ ರಷ್ಟು ನಿರಾಸೆಗೆ ಒಳಗಾಗಿರುತ್ತಾರೆ.

೩. ವಾಟರ್ಲೂ ವಿದ್ಯಾಪೀಠದಲ್ಲಿನ ಕ್ಲಿನಿಕಲ್ಸ್ ಸೈಕಾಲಜಿಯ ತಜ್ಞ ಮತ್ತು ಈ ಸಂಶೋಧನೆಯ ಲೇಖಕಿ ಜಾಸ್ಮಿನ್ ಜಾಂಗ್ ಇವರ ಪ್ರಕಾರ, ಕುಟುಂಬವೆಂದು ಪೋಷಕರು ಮತ್ತು ಮಕ್ಕಳು ಇಬ್ಬರ ವರ್ತನೆಯು ಮಹತ್ವದ್ದಾಗಿರುತ್ತದೆ. ಸಂಚಾರ ವಾಣಿಯ ಹೆಚ್ಚು ಬಳಕೆ ಮಾಡುವ ಪೋಷಕರ ವರ್ತನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವುದು ಕಂಡು ಬಂದಿದೆ, ಎಂದು ಹೇಳಿದರು.

೪. ಜಾಸ್ಮಿನ್ ಜಾಂಗ್ ತಮ್ಮ ಮಾತನ್ನು ಮುಂದುವರೆಸುತ್ತಾ, ಯಾವ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ದಿನದಲ್ಲಿ ೧ ಅಥವಾ ೨ ಗಂಟೆ ಕಳೆಯುತ್ತಾರೆ ಅವರ ಮಕ್ಕಳ ವಿಷಯವಾಗಿರುವ ವರ್ತನೆ ಹೆಚ್ಚು ಸಕಾರಾತ್ಮಕವಾಗಿರುತ್ತದೆ. ಪೋಷಕರು ಸಾಮಾಜಿಕ ದೃಷ್ಟಿಯಿಂದ ಹೆಚ್ಚು ಕ್ರಿಯಾಶೀಲವಾಗಿ ಇರಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ವಿಜ್ಞಾನವು ಎಷ್ಟೇ ಪ್ರಗತಿ ಹೊಂದಿದರೂ ಮತ್ತು ಮನುಷ್ಯನಿಗಾಗಿ ವಿವಿಧ ಸೌಲಭ್ಯಗಳ ನಿರ್ಮಾಣ ಮಾಡಿದರೂ ಅದರಿಂದ ಮನುಷ್ಯನಿಗೆ ಶಾಶ್ವತ ಮತ್ತು ಚಿರಂತನ ಆನಂದ ಸಿಗದೇ ಇರುವುದರಿಂದ ಮನುಷ್ಯ, ಸಮಾಜ ಮತ್ತು ವಾತಾವರಣದ ಹಾನಿ ಆಗುತ್ತದೆ. ಇದೇ ಕಳೆದ ಹತ್ತು ವರ್ಷಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಈಗಲಾದರೂ ವಿಜ್ಞಾನವಾದಿಯ ವಿಜ್ಞಾನದ ಟೊಳ್ಳುತನ ಅರ್ಥ ಆಗುವುದೇ ?