ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಉತ್ತರ ಪ್ರದೇಶದ ಇಟಾವಾದಲ್ಲಿ ಮೌಲ್ವಿಗೆ ೧೦ ವರ್ಷಗಳ ಜೈಲು ಶಿಕ್ಷೆ

(ಮೌಲಾನಾ ಎಂದರೆ ಇಸ್ಲಾಮಿನ ಅಭ್ಯಾಸಕ)

ಇಟಾವಾ (ಉತ್ತರ ಪ್ರದೇಶ) – ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ ಮೌಲಾನಾ ಜರಜಿಸನನ್ನು ವಾರಣಾಸಿಯ ತ್ವರಿತಗತಿ ನ್ಯಾಯಾಲಯವು ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ೧೦ ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಿದೆ. ಆದರೆ ಮೌಲ್ವಿಯು ಈ ನಿರ್ಣಯವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ. ಅತ್ಯಾಚಾರ ಘಟನೆ ನಡೆದು ಆರೂವರೆ ವರ್ಷಗಳು ಕಳೆದಿದೆ. ಆ ಸಮಯದಲ್ಲಿ ಅವನು ಮಹಿಳೆಯ ಅಶ್ಲೀಲ ಚಿತ್ರೀಕರಣವನ್ನೂ ಮಾಡಿದ್ದ ಮತ್ತು ಈ ಮೂಲಕ ‘ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಬಾರದೆಂದು’ ಅವಳನ್ನು ಹೆದರಿಸುತ್ತಿದ್ದನು.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ಷರಿಯತ್ ಕಾನೂನಿಗನುಸಾರ ಸೊಂಟದ ವರೆಗೆ ಗುಂಡಿಯಲ್ಲಿ ಹೂತು ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡುವಂತೆ ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !