ಕಠ್ಮಂಡುವಿನಲ್ಲಿ ಭಾರತದ ಅತಿ ದೊಡ್ಡ ಖೋಟಾನೋಟು ಪೂರೈಕೆದಾರ ಲಾಲ ಮೊಹಮ್ಮದ್ ಹತ್ಯೆ!

ಕಠ್ಮಂಡು (ನೇಪಾಳ) – ಸೆಪ್ಟೆಂಬರ್ ೧೯ರ ರಾತ್ರಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಗೂಢಚರ ಲಾಲ ಮೊಹಮ್ಮದ್ ಅಲಿಯಾಸ್ ಮೊಹಮ್ಮದ್ ದರ್ಜಿ ಇವನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದ ಘಟನೆಯಾಗಿದೆ. ಲಾಲನು ಭಾರತದಲ್ಲಿ ಅತಿ ಹೆಚ್ಚು ಖೋಟಾ ನೋಟುಗಳನ್ನು ಸರಬರಾಜು ಮಾಡುತ್ತಿದ್ದನು. ಈ ಎಲ್ಲಾ ಘಟನೆಗಳನ್ನು ಸಿಸಿಟಿವಿಯಲ್ಲಿ ಚಿತ್ರೀಕರಿಸಲಾಗಿದೆ. ಲಾಲ ಮೊಹಮ್ಮದ್‌ನು ಪಾಕಿಸ್ತಾನ, ಬಾಂಗ್ಲಾದೇಶದಿಂದ ನಕಲಿ ಭಾರತೀಯ ಕರೆನ್ಸಿಗಳನ್ನು ಮೊದಲು ನೇಪಾಳಕ್ಕೆ ತರುತ್ತಿದ್ದನು, ನಂತರ ಅದನ್ನು ಭಾರತಕ್ಕೆ ಸರಬರಾಜು ಮಾಡುತ್ತಿದ್ದನು. ಕುಖ್ಯಾತ ದರೋಡೆಕೋರ ಮತ್ತು ಜಿಹಾದಿ ಭಯೋತ್ಪಾದಕ ದಾವೂದ್ ಇಬ್ರಾಹಿಂ ಗ್ಯಾಂಗ್ ನೊಂದಿಗೆ ಅವನಿಗೆ ಸಂಪರ್ಕವಿತ್ತು. ಅವನು ಇತರ ಐಎಸ್‌ಐ ಗೂಢಚರರಿಗೂ ಆಶ್ರಯ ನೀಡಿದ್ದನು.

ಸಂಪಾದಕೀಯ ನಿಲುವು

ಲಾಲ ಮೊಹಮ್ಮದ್ ಭಾರತದಲ್ಲಿ ಖೋಟಾನೋಟುಗಳನ್ನು ಸರಬರಾಜು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ ಆತನ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಯಾರು ಉತ್ತರಿಸುತ್ತಾರೆ? ಇಂತಹ ಎಷ್ಟು ಲಾಲ ಮಹಮ್ಮದರು ದೇಶದಲ್ಲಿ ಮತ್ತು ಭಾರತದ ನೆರೆಹೊರೆಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುವುದು ಎಂಬುದಕ್ಕೆ ಯಾರು ಉತ್ತರಿಸುತ್ತಾರೆ ?