|
ನವದೆಹಲಿ – ಬಿಹಾರ ರಾಜ್ಯ ನಕ್ಸಲರಿಂದ ಮುಕ್ತವಾಗಿದೆ ಹಾಗೂ ಜಾರ್ಖಂಡದಲ್ಲಿ ನಕ್ಸಲ ವಿರೋಧದ ಹೋರಾಟ ಕೊನೆಯ ಹಂತದಲ್ಲಿದೆ. ಜಾರ್ಖಂಡದಲ್ಲಿನ ನಕ್ಸಲ ಬಹುಸಂಖ್ಯಾತವಿರುವ ಬುರಹಾ ಪಹಾಡ ಈ ಕ್ಷೇತ್ರ ನಕ್ಸಲವಾದದಿಂದ ಮುಕ್ತವಾಗಿದ್ದು ಸರಿ ಸುಮಾರು ಮೂವತ್ತು ವರ್ಷದ ನಂತರ ಪೊಲೀಸರು ಅಲ್ಲಿ ನೆಲೆ ಉರುತ್ತಿದ್ದಾರೆ ಎಂದು ಕೇಂದ್ರೀಯ ಮೀಸಲು ಪೊಲೀಸ ಪಡೆಯ ಮಹಾನಿರ್ದೇಶಕ ಕುಲದೀಪ ಸಿಂಹ ಇವರು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪೊಲೀಸರ ಯಶಸ್ಸಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾಹ ಇವರು ಅವರನ್ನು ಅಭಿನಂದಿಸಿದ್ದಾರೆ.
ಕುಲದೀಪ ಸಿಂಹ ತಮ್ಮ ಮಾತನ್ನು ಮುಂದುವರೆಸುತ್ತಾ…
೧. ಬಿಹಾರ ರಾಜ್ಯ ಈಗ ಕಮ್ಯುನಿಸ್ಟ್ ಕಟ್ಟರವಾದದಿಂದ ಮುಕ್ತವಾಗಿದೆ. ಬಲವಂತವಾಗಿ ವಸೂಲಿ ಮಾಡುವ ಗುಂಪುಗಳ ರೂಪದಲ್ಲಿ ಮಾವೋವಾದಿ ಕಾರ್ಯನಿರತ ಆಗಿರಬಹುದು; ಆದರೆ ಈಗ ಸಂಪೂರ್ಣ ಪೂರ್ವ ಭಾರತದಲ್ಲಿ ಅವರ ವರ್ಚಸ್ಸ ಕಡಿಮೆಯಾಗಿದೆ. (ಮಾವೋವಾದಿಗಳಿಂದ ನಡೆಯುವ ಈ ವಸೂಲಿ ಕೂಡ ನಿಲ್ಲಿಸಬೇಕು ! ಸಂಪಾದಕರು)
೨. ಏಪ್ರಿಲ್ ೨೦೨೨ ರಿಂದ ೩ ವಿಶೇಷ ಅಭಿಯಾನಗಳನ್ನು ಆರಂಭಿಸಲಾಗುವುದು. ಇದರಲ್ಲಿ ‘ಆಪರೇಷನ್ ಅಕ್ಟೋಪಸ್’, ‘ಆಪರೇಷನ್ ಥಂಡರಸ್ಟಾರ್ಮ’ ಮತ್ತು ‘ಆಪರೇಷನ್ ಬುಲ್ ಬುಲ್’ ಇದರ ಸಮಾವೇಶವಿದೆ. ಈ ಅಭಿಯಾನದಿಂದಾಗಿ ಕೇಂದ್ರೀಯ ಮೀಸಲು ಪೊಲೀಸ ಪಡೆಗೆ ಜಾರ್ಖಂಡ್ ಛತ್ತೀಸ್ಗಡ್ ಗಡಿಯಲ್ಲಿರುವ ಬುರಹಾ ಪಹಾಡ್ ನಕ್ಸಲರ ನಿಯಂತ್ರಣದಿಂದ ಮುಕ್ತಗೊಳಿಸಲಾಯಿತು. ೩೦ ವರ್ಷಗಳ ನಂತರ ಪೊಲೀಸರಿಗೆ ಈ ಯಶಸ್ಸು ದೊರೆತಿದೆ.
The incidents of Left Wing Extremism (LWE) have come down significantly. There have been 77% reduction. In 2009, it was at an all-time high of 2258, which has come down to 509 at present. Death rate has come down by 85%: Kuldiep Singh, DG, CRPF pic.twitter.com/CzQDY8Yccb
— ANI (@ANI) September 21, 2022
ಸಂಖ್ಯಾವಾರು ಮೂಲಕ ನಕ್ಸಲರಲ್ಲಿ ಆಗಿರುವ ಇಳಿತ ತಿಳಿದುಕೊಳ್ಳೋಣ !೨೦೧೦ ರಲ್ಲಿ ೬೦ ಜಿಲ್ಲೆಗಳು ನಕ್ಸಲರ ದಾಳಿಯಿಂದ ತೊಂದರೆಗಿಡಾಗಿದ್ದವು. ಇಂದು ಈ ಸಂಖ್ಯೆ ೩೯ ಆಗಿದೆ. ನಕ್ಸಲರಿಂದಾಗಿ ದೊಡ್ಡ ಪ್ರಮಾಣದ ದಾಳಿಗಳು ನಡೆಯುತ್ತಿರುವ ಜಿಲ್ಲೆಗಳ ಸಂಖ್ಯೆ ೨೦೧೫ ರಲ್ಲಿ ೩೫ ರಷ್ಟು ಇತ್ತು. ಅದು ೨೦೨೧ ರಲ್ಲಿ ೨೫ ರಷ್ಟು ಆಗಿದೆ. ಒಟ್ಟಾರೆ ನಕ್ಸಲರ ದಾಳಿಯ ಪೈಕಿ ಈ ಜಿಲ್ಲೆಗಳಲ್ಲಿನ ಪ್ರಮಾಣ ಶೇ. ೯೦ ರಷ್ಟು ಆಗಿದೆ ! |
ಕಳೆದ ಕೆಲವು ತಿಂಗಳಲ್ಲಿ ೧೪ ಮಾವೋದಿಗಳು ಹತರಾಗಿದ್ದಾರೆ ಹಾಗೂ ೫೯೦ ಜನರನ್ನು ಬಂಧಿಸಲಾಗಿದೆ ! – ಗೃಹ ಸಚಿವಈ ಯಶಸ್ಸಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಹ ಇವರು, ದೇಶದ ಆಂತರಿಕ ಸುರಕ್ಷೆಯಲ್ಲಿ ಇದು ಐತಿಹಾಸಿಕ ಮೈಲುಗಲ್ಲು ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ನಕ್ಸಲರ ವಿರೋಧವಾಗುತ್ತಿರುವಾಗ ನಿರ್ಣಾಯಕ ಯುದ್ಧದಲ್ಲಿ ಭದ್ರತಾ ಪಡೆಗೆ ಸಿಕ್ಕಿರುವ ಅಭೂತ ಪೂರ್ವ ವಿಜಯವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಾವೋವಾದಿ ವಿರುದ್ಧ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಅಭಿಯಾನದಿಂದ ೧೪ ಮಾವೋವಾದಿಗಳ ಹತ್ಯೆ ಮಾಡಲಾಯಿತು. ಮತ್ತು ೫೯೦ ಕ್ಕಿಂತಲೂ ಹೆಚ್ಚಿನ ಜನರಿಗೆ ಬಂಧಿಸಲಾಗಿದೆ ಅಥವಾ ಅವರು ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ. |
ಸಂಪಾದಕೀಯ ನಿಲುವು
|