ನವರಾತ್ರಿ ಮತ್ತು ದೀಪಾವಳಿಯಲ್ಲಿ ಬೆಲೆ ಏರಿಕೆ ಆಗುವ ಲಕ್ಷಣ; ರೂಪಾಯಿಯ ಮೌಲ್ಯ ಕುಸಿತ

ಮುಂಬಯಿ – ಮುಂಬರುವ ಸಮಯದಲ್ಲಿ ಬೆಲೆ ಏರಿಕೆಯಲ್ಲಿ ಇನ್ನು ಹೆಚ್ಚಳ ಆಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ೨೨ ರಂದು ಶೇರ್ ಮಾರ್ಕೆಟ್ ಆರಂಭವಾದ ನಂತರ ಭಾರತೀಯ ರೂಪಾಯಿಯ ಮೌಲ್ಯ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಬರುವ ಕಾಲದಲ್ಲಿ ಒಂದು ಅಮೆರಿಕ ಡಾಲರಿಗಾಗಿ ೮೦.೨೮ ರೂಪಾಯಿ ತೆತ್ತಬೇಕಾಗುತ್ತದೆ. ರೂಪಾಯಿಯ ಮೌಲ್ಯ ಕುಸಿದಿರುವುದರಿಂದ ಭಾರತದಲ್ಲಿನ ಅನೇಕ ವಸ್ತುಗಳು ಮುಂಬರುವ ನವರಾತ್ರಿ ಮತ್ತು ದೀಪಾವಳಿಯ ಸಮಯದಲ್ಲಿ ಬೆಲೆ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ.

ಅಮೇರಿಕಾದ ಫೆಡರಲ್ ರಿಸರ್ವ್ ಬ್ಯಾಂಕನಿಂದ ಬಡ್ಡಿ ದರದಲ್ಲಿ ಶೇ. ೦.೭೫ ರಷ್ಟು ಹೆಚ್ಚಿಸಿದ್ದು ಮುಂದಿನ ೩ ತಿಂಗಳಲ್ಲಿ ಇನ್ನು ಬಡ್ಡಿದರ ಹೆಚ್ಚಿಸುವ ಅನುಮಾನ ಇದೆ. ಆದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಮುಂಬರುವ ಸಮಯದಲ್ಲಿ ಹೆಚ್ಚಾಗಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿರುವುದರಿಂದ ಈ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಆದ್ದರಿಂದ ನವರಾತ್ರಿ ದೀಪಾವಳಿಯಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾಗಬಹುದು. ಇದನ್ನು ಬಿಟ್ಟು ಕೆಲವು ಬೇಳೆ ಕಾಳುಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು ತುಟ್ಟಿಯಾಗುವ ಸಾಧ್ಯತೆ ಬಗ್ಗೆ ಕೂಡ ಹೇಳಲಾಗುತ್ತಿದೆ.