ಪ್ರಧಾನಮಂತ್ರಿ ಮೋದಿಯವರು ‘ಇದು ಯುದ್ಧದ ಸಮಯವಲ್ಲ’, ಎಂದು ಹೇಳುವುದು ಅತ್ಯಂತ ಸೂಕ್ತ !

ಫ್ರಾನ್ಸ್‌ನ ಅಧ್ಯಕ್ಷ ಇಮೆನ್ಯುಎಲ್ ಮೆಕ್ರಾನ್ ಇವರಿಂದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರತಿಪಾದನೆ !

ಪ್ಯಾರೀಸ್ (ಫ್ರಾನ್ಸ್) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ಇದು ಯುದ್ಧದ ಸಮಯವಲ್ಲ’, ಎಂದು ಹೇಳುವುದು ಅತ್ಯಂತ ಸೂಕ್ತವಾಗಿದೆ. ಇದು ಸೇಡು ತೀರಿಸುವ ಅಥವಾ ‘ಪಾಶ್ಚಿಮಾತ್ಯ ವಿರುದ್ಧ ಏಶಿಯಾ ದೇಶ’ ಎಂಬ ವಿರೋಧ ಮಾಡುವ ಸಮಯವಲ್ಲ. ನಮ್ಮ ಮುಂದಿರುವ ಆವಾಹನಗಳಿಗೆ ಒಗ್ಗಟ್ಟಾಗಿ ಎದುರಿಸಲು ಇದೇ ಸಮಯವಾಗಿದೆ. ಎಂದು ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮೆನ್ಯುಎಲ್ ಮೆಕ್ರಾನ್ ಇವರು ಹೇಳಿದ್ದಾರೆ. ವಿಶ್ವ ಸಂಸ್ಥೆಯ ಮಹಾಸಭೆಯ ೭೭ ನೇ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಶಾಂಘಾಯ ಸಹಕಾರ್ಯ ಸಂಘಟನೆಯ ೨೨ ನೇ ವಾರ್ಷಿಕ ಪರಿಷತ್ತಿನ ನಿಮಿತ್ತದಲ್ಲಿ ಆಯೋಜಿಸಿದ ದ್ವಿಪಕ್ಷೀಯ ಚರ್ಚೆಯಲ್ಲಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತೀನ್ ಇವರಿಗೆ ‘ಇದು ಯುದ್ಧದ ಸಮಯವಲ್ಲ, ಎಂದು ಸಲಹೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಮೆಕ್ರಾನ್ ಇವರು ಈ ಹೇಳಿಕೆಯನ್ನು ನೀಡಿದರು. ಮೋದಿ ಇವರ ಹೇಳಿಕೆಗೆ ಪುತಿನ್, ‘ಯುದ್ಧವಿಷಯದ ನಿಮ್ಮ ಚಿಂತೆಯನ್ನು ನಾನು ತಿಳಿದುಕೊಳ್ಳಬಲ್ಲೆ. ಯುದ್ಧ ಶೀಘ್ರದಲ್ಲಿಯೆ ಮುಗಿಸಬೇಕೆಂದು ನಮಗೂ ಇಚ್ಛೆಯಿದೆ; ಆದರೆ ಯುಕ್ರೇನ್ ಚರ್ಚೆಯಲ್ಲಿ ರುಚಿ ತೋರಿಸಲಿಲ್ಲ.’ ಎಂದು ಹೇಳಿದರು.

ಯುಕ್ರೇನ್‌ನಲ್ಲಿನ ಸಂಘರ್ಷದ ವಿಷಯದಲ್ಲಿ ಮೆಕ್ರಾನ್, ರಷ್ಯಾ ಇಂದು ದ್ವಿಮುಖ ನಿಲುವನ್ನು ತೆಗೆದುಕೊಳ್ಳುತ್ತಿದೆ; ಆದರೆ ಯುಕ್ರೇನ್‌ನಲ್ಲಿನ ಯುದ್ಧವು ಇಂತಹ ಸಂಘರ್ಷವಾಗಿರಬಾರದು, ಅದರಲ್ಲಿ ಒಬ್ಬರು ಉದಾಸೀನರಾಗಿರಬೇಕಾಗುತ್ತದೆ ಎಂದು ಹೇಳಿದರು.