ಲಿಸೆಸ್ಟರ (ಬ್ರಿಟನ) – ಇಲ್ಲಿನ ಪಾಕಿಸ್ತಾನಿ ಮುಸಲ್ಮಾನರು ಹಿಂದೂಗಳ ಮೇಲೆ ಮಾಡಿರುವ ಆಕ್ರಮಣದ ಪ್ರಕರಣದಲ್ಲಿ ಈ ವರೆಗೆ ಪೊಲೀಸರು ೪೭ ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಈ ಹಿಂಸಾಚಾರದಲ್ಲಿ ಐಮಾಸ ನೊರೋನ್ಹಾ ಎಂಬ ೨೦ ವರ್ಷದ ಯುವಕನನ್ನು ಬಂಧಿಸಿಲಾಗಿದ್ದು ಶಸ್ತ್ರವನ್ನು ಹೊಂದಿರುವ ಪ್ರಕರಣದಲ್ಲಿ ಅವನಿಗೆ ೧೦ ತಿಂಗಳ ಶಿಕ್ಷೆಯನ್ನು ವಿಧಿಸಲಾಗಿದೆ. ‘ಈ ಹಿಂಸಾಚಾರದ ಸಂದರ್ಭದಲ್ಲಿ ಯಾರ ಬಳಿಯಾದರೂ ಹೆಚ್ಚಿನ ಮಾಹಿತಿ ಇದ್ದರೆ ನಮಗೆ ತಿಳಿಸಿ, ಎಂದು ಪೊಲೀಸರು ನಾಗರೀಕರಿಗೆ ಕರೆ ನೀಡಿದ್ದಾರೆ. ಈ ಹಿಂಸಾಚಾರದಲ್ಲಿ ೧೬ ಪೊಲೀಸರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವುಬ್ರಿಟನಿನಂತೆಯೇ ಭಾರತದಲ್ಲಿಯೂ ಇಷ್ಟು ಶೀಘ್ರಗತಿಯಲ್ಲಿ ನ್ಯಾಯ ದೊರೆಯುವುದು ಯಾವಾಗ ? |
ಪ್ರಸಾರಮಾಧ್ಯಮಗಳಿಂದ ಹಿಂದೂ ವಿರೋಧಿ ವಾರ್ತೆಗಳ ಬಿತ್ತರ ! – ಪ್ರತ್ಯಕ್ಷದರ್ಶಿ
ಹಿಂಸಾಚಾರದಲ್ಲಿನ ಓರ್ವ ಪ್ರತ್ಯಕ್ಷದರ್ಶಿಯಾದ ದೀಶಿತಾ ಸೋಲಂಕಿಯವರು ‘ಇಲ್ಲಿನ ಪ್ರಸಾರ ಮಾಧ್ಯಮಗಳು ಈ ಹಿಂಸಾಚಾರದ ವಾರ್ತೆಯನ್ನು ಹಿಂದೂ ವಿರೋಧಿ ಸ್ವರೂಪದಲ್ಲಿ ಬಿತ್ತರಿಸಿವೆ. ‘ಹಿಂದೂಗಳು ಆಕ್ರಮಣ ಮಾಡಿದರು’ ಎಂಬಂತಹ ವಾರ್ತೆಗಳನ್ನು ಪ್ರಕಟಿಸಲಾಗಿದೆ. ಪ್ರಾಮಾಣಿಕತೆಯಿಂದ ವಾರ್ತೆಗಳನ್ನು ತೋರಿಸಬೇಕು ಎಂದು ನನಗೆ ಅನಿಸುತ್ತದೆ; ಆದರೆ ಇಲ್ಲಿ ಅದು ಕಂಡುಬಂದಿಲ್ಲ. ನಾನು ಏನು ನೋಡಿದ್ದೇನೆಯೋ ಅದಕ್ಕೆ ವಿರುದ್ಧವಾದ ವಾರ್ತೆಯನ್ನು ಪ್ರಕಾಶಿಸಲಾಗಿದೆ’ ಎಂದು ಹೇಳಿದರು.
ಸಂಪಾದಕೀಯ ನಿಲುವುಬ್ರಿಟನನಲ್ಲಿರುವ ಪ್ರಸಾರಮಾಧ್ಯಮಗಳೂ ಭಾರತದಲ್ಲಿನ ಪ್ರಸಾರಮಾಧ್ಯಮಗಳಂತೆಯೇ ಢೋಂಗಿ ಜಾತ್ಯಾತೀತವಾದಿಯಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! |