ಗುಜರಾತ್ ನ ಮುಂದ್ರಾ ಬಂದರಿನಿಂದ ೪೮ ಕೋಟಿ ರೂಪಾಯ ಇ-ಸಿಗರೇಟ್ ವಶ

ಇ-ಸಿಗರೇಟ್ ಎಂದರೆ ಏನು ?

ಇ-ಸಿಗರೇಟ ಅಥವಾ ‘ಬಾಷ್ಪಯುಕ್ತ ಸಿಗರೇಟ’ ಇದು ಬ್ಯಾಟರಿಯಿಂದ ನಡೆಯುವ ಉಪಕರಣವಾಗಿದೆ. ಸಿಗರೇಟಿಗೆ ಪರ್ಯಾಯವೆಂದು ‘ಇ-ಸಿಗರೇಟ್’ನನ್ನು ನೋಡಲಾಗುತ್ತಿದೆ. ಇ ಸಿಗರೇಟ್ ಮೂಲಕ ನಿರ್ಮಾಣವಾಗಿರುವ ಹಬೆ ಶ್ವಾಸದ ಮೂಲಕ ಶರೀರಕ್ಕೆ ಹೋದ ನಂತರ ತಂಬಾಕಿನ ಹೊಗೆಯ ಹಾಗೆ ರುಚಿ ಮತ್ತು ಶಾರೀರಿಕ ಸಂವೇದನೆ ವ್ಯಕ್ತಿಗೆ ದೊರೆಯುತ್ತದೆ.

ಮುಂದ್ರಾ (ಗುಜರಾತ್) –  ಇಲಾಖೆಯ ಗುಪ್ತಚರದಳದಿಂದ ಇಲ್ಲಿಯ ಮುಂದ್ರಾ ಬಂದರಿನಲ್ಲಿ ದಾಳಿ ನಡೆಸಿ ೪೮ ಕೋಟಿ ರೂಪಾಯಿಯ ‘ಇ-ಸಿಗರೇಟ,’ ವಶಪಡಿಸಿಕೊಳ್ಳಲಾಗಿದೆ. ಇ-ಸಿಗರೇಟಿನ ಇಲ್ಲಿ ಕಳ್ಳ ಸಾಗಾಣಿಕೆ ನಡೆಯುತ್ತಿರುವುದು ಈ ದಳಕ್ಕೆ ಮಾಹಿತಿ ದೊರೆತಿತ್ತು. ಅದರಂತೆ ಇಲ್ಲಿ ದಾಳಿ ನಡೆಸಲಾಯಿತು. ಒಂದು ಕಂಟೇನರ್ ನಿಂದ ನೆಲವರಿಸಲು ‘ಮೊಪ್ಸ್’ ತರಸಲಾಗಿರುವ ಮಾಹಿತಿ ಪೊಲೀಸರಿಗೆ ದೊರೆತಿತ್ತು; ಆದರೆ ಪ್ರತ್ಯಕ್ಷದಲ್ಲಿ ಈ ಕಂಟೇನರ್ ನಲ್ಲಿ ಕೆಲವು ಬಾಕ್ಸ್‌ಗಳಲ್ಲಿ ಇ-ಸಿಗರೇಟ್ ಕಂಡು ಬಂದಿತು. ಇದರಲ್ಲಿ ಒಟ್ಟು ೨ ಲಕ್ಷ ಇ-ಸಿಗರೇಟ್ ದೊರೆತಿದೆ. ಈ ಇ-ಸಿಗರೇಟ್ ಚೀನಾದಲ್ಲಿ ತಯಾರಿಸಲಾಗಿದೆ.

ಸಂಪಾದಕೀಯ ನಿಲುವು

ಈ ಮೊದಲು ಕೂಡ ಇದೇ ಬಂದರಿನಲ್ಲಿ ಕೋಟ್ಯಾಂತರ ರೂಪಾಯಿ ಮಾದಕ ವಸ್ತುಗಳು ಪತ್ತೆಯಾಗಿತ್ತು. ಈ ರೀತಿ ಬಂದರಿನಲ್ಲಿ ಈಗ ಸತತವಾಗಿ ವಿಸ್ತೃತ ಪರಿಶೀಲನೆ ಮಾಡುವುದು ಅವಶ್ಯಕವಾಗಿದೆ !