|
ಚಂದೀಗಡ – ಪಂಜಾಬ್‌ನ ಮೊಹಾಲೀ ನಗರದ ಚಂಡೀಗಡ ವಿದ್ಯಾಪಿಠದಲ್ಲಿ ಕಲಿಯುವ ೬೦ ವಿದ್ಯಾರ್ಥಿನಿಯರು ಸ್ನಾನ ಮಾಡುವುದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದ ಇವರಲ್ಲಿನ ೮ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇವರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದೆ. ಈ ವಿಡಿಯೋವನ್ನು ಇದೇ ವಿದ್ಯಾಪೀಠದ ಓರ್ವ ವಿದ್ಯಾರ್ಥಿನಿ ನಿರ್ಮಿಸಿ ಅದನ್ನು ಶಿಮ್ಲಾದಲ್ಲಿನ ಅವಳ ಸ್ನೇಹಿತನಿಗೆ ಕಳುಹಿಸಿದ್ದಳು. ಅವನು ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದನು. ಅನಂತರ ಈ ವಿದ್ಯಾಪೀಠದಲ್ಲಿ ದೊಡ್ಡ ಗೊಂಧಲ ನಿರ್ಮಾಣವಾಯಿತು. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದವನನ್ನು ಪೊಲೀಸರು ಹುಡುಕುತ್ತಿದ್ದಾರೆ. ವಿಡಿಯೋಸ್ ಕಳುಹಿಸಿದ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಂದೆಡೆ ವಿದ್ಯಾಪೀಠದ ಹೊರಗೆ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಇಡಲಾಗಿದೆ. ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟೀ ಇವರು, ‘ನಾನು ಸ್ವತಃ ಹೋಗಿ ಸಂಪೂರ್ಣ ಪ್ರರಣದ ಬಗ್ಗೆ ತಿಳಿದುಕೊಳ್ಳುವೆನು. ‘ಈ ಪ್ರಕರಣದಲ್ಲಿ ನಾವು ಕಠಿಣ ಕ್ರಮತೆಗೆದುಕೊಳ್ಳುವೆವು’, ಎಂದು ಶಿಕ್ಷಣ ಸಚಿವ ಹರಜೋತ ಬೈಂಸ ಇವರು ಹೇಳಿದರು.
Chandigarh University: Eight girls attempt suicide after a classmates leaks nude videos of almost 60 students, probe underway https://t.co/IgDjCY9y86
— OpIndia.com (@OpIndia_com) September 18, 2022
೧. ಯಾವ ವಿದ್ಯಾರ್ಥಿನಿಯರ ವಿಡಿಯೋ ಪ್ರಸಾರವಾಗಿದೆಯೊ, ಅವರೆಲ್ಲರೂ ಎಮ್‌ಬಿಎಯ ವಿದ್ಯಾರ್ಥಿನಿಯರಾಗಿದ್ದಾರೆ. ಆರೋಪಿ ವಿದ್ಯಾರ್ಥಿನಿ ಅನೇಕ ದಿನಗಳಿಂದ ವಿಡಿಯೋ ತಯಾರಿಸಿ ಅವಳ ಸ್ನೇಹಿತನಿಗೆ ಕಳುಹಿಸುತ್ತಿದ್ದಳು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದನಂತರ ಈ ವಿದ್ಯಾರ್ಥಿನಿಯರ ಪೈಕಿ ಒಬ್ಬಳು ಅದನ್ನು ನೋಡಿದನಂತರ ಗೊಂದಲ ಆರಂಭವಾಯಿತು.
೨. ವಿದ್ಯಾಪೀಠದ ವಸತಿಗೃಹದ ಮಹಿಳಾ ವಾರ್ಡನ್ (ಮುಖ್ಯಸ್ಥೆ) ಆರೋಪಿ ವಿದ್ಯಾರ್ಥಿನಿಗೆ ವಿಚಾರಿಸಿದಾಗ ಅವಳು, ‘ನಾನು ಈ ವಿಡಿಯೋಗಳನ್ನು ಒಬ್ಬ ಹುಡುಗನಿಗೆ ಕಳುಹಿಸಿದ್ದೇನೆ. ನನಗೆ ಆ ಹುಡುಗನ ಪರಿಚಯವಿಲ್ಲ.’ ವಾರ್ಡನ್ ಪದೇ ಪದೇ ವಿಚಾರಿಸಿದರೂ ಇವಳು ಆ ಹುಡುಗನ ಹೆಸರು ಮತ್ತು ಅವನೊಂದಿಗಿನ ಸಂಬಂಧವೇನು, ಎಂಬುದನ್ನು ಹೇಳಿಲ್ಲ. ಅವಳಿಗೆ ಈ ವಿಡಿಯೋಗಳನ್ನು ಎಂದಿನಿಂದ ತಯಾರಿಸುತ್ತಿದ್ದೀ ಎಂದು ಕೇಳಿದಾಗಲೂ ಅವಳು ಉತ್ತರವನ್ನು ಕೊಡಲಿಲ್ಲ. ಅವಳು ಪುನಃ ಪುನಃ ತಪ್ಪಾಯಿತು. ಇನ್ನು ಮುಂದೆ ಮಾಡುವುದಿಲ್ಲ.’ ಎಂದು ಹೇಳುತ್ತಿದ್ದಳು.
೩. ಸ್ನಾನದ ವಿಡಿಯೋ ಬೆಳಕಿಗೆ ಬಂದನಂತರ ಎಲ್ಲ ವಿದ್ಯಾರ್ಥಿನಿಯರು ವಸತಿಗೃಹವನ್ನು ಖಾಲಿ ಮಾಡಿ ಹೊರಗೆ ಬಂದರು. ಅವರು ‘ನಮಗೆ ನ್ಯಾಯ ಬೇಕು’ ಎಂದು ಘೋಷಣೆ ನೀಡಲು ಆರಂಭಿಸಿದರು. ವಿದ್ಯಾರ್ಥಿಯರು ಸಂಪೂರ್ಣ ವಿದ್ಯಾಪೀಠಕ್ಕೆ ಮುತ್ತಿಗೆ ಹಾಕಿದರು. ಇದನ್ನು ನೋಡಿ ಸುರಕ್ಷಾ ಕಾರ್ಮಿಕರು ವಿದ್ಯಾಪೀಠದ ಬಾಗಿಲು ಮುಚ್ಚಿದರು. ತಕ್ಷಣ ಪೊಲೀಸರನ್ನು ಕರೆಯಲಾಯಿತು. ಪೊಲೀಸರು ವಿದ್ಯಾರ್ಥಿನಿಯರನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದಾಗ ಅವರು ಪೊಲೀಸರ ವಾಹನವನ್ನೆ ಪಲ್ಟಿ ಮಾಡಿದರು. ಅವರನ್ನು ಶಾಂತಗೊಳಿಸಲು ಪೊಲೀಸರು ಲಾಠಿಯನ್ನೂ ಬೀಸಬೇಕಾಯಿತು. ಅನಂತರ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಂಪಾದಕೀಯ ನಿಲುವು
|