ಅತ್ಯಾಚಾರ ಮಾಡುವ ಆರೋಪಿ ಮುಸಲ್ಮಾನರಾಗಿದ್ದರೆ, ಅವನಿಗೆ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ನೀಡಿರಿ !

ಸಮಾಜವಾದಿ ಪಕ್ಷದ ಶಾಸಕರಾದ ಎಸ್.ಟಿ. ಹಸನ ಇವರ ಆವಾಹನೆ !

ಸಮಾಜವಾದಿ ಪಕ್ಷದ ಶಾಸಕರಾದ ಎಸ್.ಟಿ. ಹಸನ

ಮುರಾದಾಬಾದ (ಉತ್ತರಪ್ರದೇಶ) – ಈ ಮೊದಲು ಕೂಡ ಇಬ್ಬರು ದಲಿತ ಯುವತಿಯರ ಮೇಲೆ ಅತ್ಯಾಚಾರ ನಡೆದಿತ್ತು ಮತ್ತು ಅವರ ಶವಗಳನ್ನು ಮರದ ಮೇಲೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ದೊರೆತಿದ್ದವು. ಯಾವಾಗ ಆರೋಪಿ ಅಪರಾಧ ಮಾಡುತ್ತಾನೆ, ಆಗ ಅವನಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವುದು ಅವಶ್ಯಕವಾಗುತ್ತದೆ. ಈಗಲೂ ಯಾರಾದರೂ ಆರೋಪಿ ಮುಸಲ್ಮಾನರಾಗಿದ್ದರೆ ಅವನಿಗೆ ಶರಿಯುತ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಸೊಂಟದ ವರೆಗೆ ಗುಂಡಿಯಲ್ಲಿ ಹುಗಿದು ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ನೀಡಬೇಕು ಅಂದರೆ ಇದರ ನಂತರ ಯಾರು ಈ ರೀತಿಯ ಕೃತ್ಯ ಮಾಡುಲು ಪ್ರಯತ್ನಿಸುವುದಿಲ್ಲ, ಎಂದು ಸಮಾಜವಾದಿ ಪಕ್ಷದ ಶಾಸಕ ಸಯ್ಯದ್ ತೂಫೈಲ್ ಹಸನ್ (ಎಸ್.ಟಿ. ಹಸನ್) ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ಲಖಿಮಪುರ ಖಿರಿ ಇಲ್ಲಿ ಅಪ್ರಾಪ್ತ ದಲಿತ ಹುಡುಗಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿದ್ದರು. ಈ ಪ್ರಕರಣದಲ್ಲಿ ೬ ಆರೋಪಿಗಳನ್ನು ಬಂಧಿಸಲಾಗಿದ್ದು ಅದರಲ್ಲಿ ೫ ಮುಸಲ್ಮಾನರು ಹಾಗೂ ಒಬ್ಬನು ಹಿಂದೂ ಆಗಿದ್ದಾನೆ.

ಸಂಪಾದಕೀಯ ನಿಲುವು

‘ಸನಾತನ ಪ್ರಭಾತ’ ಕಳೆದ ಅನೇಕ ತಿಂಗಳಿಂದ ಈ ರೀತಿ ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯವೇನು ಇಲ್ಲ’, ಎಂದು ಹೇಳುತ್ತಿದೆ. ಅದೇ ಬೇಡಿಕೆ ಶಾಸಕ ಎಸ್.ಟಿ. ಹಸನ್ ಇವರು ಈಗ ಮಾಡುತ್ತಿದ್ದಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ !