ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ ವಾತ್ಸಲ್ಯಮೂರ್ತಿ ಪ.ಪೂ. ಜೀಜೀ (ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ) ಇವರ ದೇಹತ್ಯಾಗ !

ಪ.ಪೂ. ಭಕ್ತರಾಜ ಮಹಾರಾಜ
ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ

ನಾಶಿಕ, ಸಪ್ಟೆಂಬರ್ ೧೮ (ವಾರ್ತಾ) – ಸನಾತನ ಸಂಸ್ಥೆಯ ಶ್ರದ್ಧಾ ಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾ ಅವರ) ಧರ್ಮಪತ್ನಿ ಮತ್ತು ಪೂ. ನಂದು ಕಸರೇಕರ ಇವರ ತಾಯಿ ಪ.ಪೂ. ಜೀಜೀ (ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ) (ವಯಸ್ಸು ೮೬ ವರ್ಷ) ಇವರು ಸಪ್ಟೆಂಬರ್ ೧೮ ರಂದು ಮಧ್ಯಾಹ್ನ ೨ ಗಂಟೆಗೆ ನಾಶಿಕದಲ್ಲಿ ಅವರ ಕಿರಿಯ ಸುಪುತ್ರ ಶ್ರೀ. ರವೀಂದ್ರ ಕಸರೇಕರ ಇವರ ಮನೆಯಲ್ಲಿ ದೇಹತ್ಯಾಗ ಮಾಡಿದರು. ಪ.ಪೂ. ಜೀಜೀ ಎಂದರೆ ವಾತ್ಸಲ್ಯಭಾವದ ಸಾಕಾರಮೂರ್ತಿಯಾಗಿದ್ದರು. ಪ.ಪೂ. ಬಾಬಾ ಅವರ ಎಲ್ಲಾ ಭಕ್ತರನ್ನು ಅವರು ವಾತ್ಸಲ್ಯದಿಂದ ಜೋಡಿಸಿದ್ದರು.
ಪ.ಪೂ. ಜೀಜೀಯವರ ನಂತರ ಅವರ ಹಿರಿಯ ಸುಪುತ್ರ ಪೂ. ನಂದು (ಹೇಮಂತ) ಕಸರೇಕರ, ಮಧ್ಯದ ಸುಪುತ್ರ ಶ್ರೀ. ಸುನಿಲ ಕಸರೇಕರ, ಕಿರಿಯ ಸುಪುತ್ರ ಶ್ರೀ. ರವೀಂದ್ರ ಕಸರೇಕರ ಹಾಗೂ ಅವರ ಹಿರಿಯ ಸೊಸೆ ಸೌ. ಸ್ಮಿತಾ ಹೇಮಂತ ಕಸರೇಕರ, ಮಧ್ಯದ ಸೊಸೆ ಸೌ. ನಯನಾ ಸುನಿಲ ಕಸರೇಕರ ಮತ್ತು ಕಿರಿಯ ಸೊಸೆ ಸೌ. ನೀಲಿಮಾ ರವೀಂದ್ರ ಕಸರೇಕರ ಹಾಗೂ ಕು. ದೀಪಾಲಿ, ಕು. ವೈಭವಿ, ಚಿ. ಸೋಹಂ ಮತ್ತು ಕು. ರೇವಾ ಈ ಮೊಮ್ಮಕ್ಕಳು ಈ ರೀತಿ ಅವರ ಕುಟುಂಬವಿದೆ. ಸನಾತನ ಪರಿವಾರ ಕಸರೇಕರ ಕುಟುಂಬದ ದುಃಖದಲ್ಲಿ ಸಹಭಾಗಿ ಆಗಿದೆ.

ಪ.ಪೂ. ಜೀಜೀ ಇವರ ಮೃತ ದೇಹದ ಅಂತ್ಯಸಂಸ್ಕಾರ ಶ್ರೀ ಕ್ಷೇತ್ರ ಕಾಂದಳಿ (ವಡಗಾವ, ತಾಲೂಕ ಜುನ್ನರ, ಪುಣೆ ಜಿಲ್ಲೆ) ಇಲ್ಲಿ ಸಪ್ಟೆಂಬರ್ ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವುದು.

ಸನಾತನದ ಕಾರ್ಯಕ್ಕೆ ಅಪಾರ ಆಶೀರ್ವಾದ ನೀಡುವ ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ ಪ.ಪೂ. (ದಿ.) ಸುಶೀಲಾ ದಿನಕರ ಕಸರೇಕರ !

ಸನಾತನದ ರಾಮನಾಥಿ ಆಶ್ರಮದಲ್ಲಿ ಸಂವಾದ ನಡೆಸುತ್ತಿರುವ ಪ.ಪೂ. ಜೀಜೀ ಮತ್ತು ಡಾ. ಜಯಂತ ಅಠವಲೆ (೨.೬.೨೦೧೪)

‘ಭಜನೆ’, ‘ಭ್ರಮಣ’ ಮತ್ತು ‘ಭಂಡಾರಾ’ ಈ ಮೂರು ಮಾಧ್ಯಮದಿಂದ ಹಗಲಿರಳು ಕಾರ್ಯ ಮಾಡುವ ನಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ (ಪ.ಪೂ. ಜೀಜೀ) ಇವರು ಇಂದು ದೇಹತ್ಯಾಗ ಮಾಡಿದರು. ೧೭ ನೇ ವಯಸ್ಸಿನಲ್ಲಿ ವಿವಾಹವಾದ ನಂತರ ಅವರು ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಇವರಂತಹ ಉಚ್ಚ ಕೋಟಿಯ ಸಂತರ ಸಂಸಾರ ನಿರ್ವಹಿಸುವ ಶಿವ ಧನುಷ್ಯವನ್ನು ಜೀವಮಾನವಿಡಿ ಎತ್ತಿದ್ದರು.

ಪ.ಪೂ. ಜೀಜೀ ಇವರ ಸಾಧನೆಯು ಅತ್ಯಂತ ಕಠಿಣವಾಗಿತ್ತು. ಜಗದೋದ್ಧಾರದ ವ್ರತ ಕೈಗೊಂಡಿದ್ದ ಪ.ಪೂ. ಬಾಬಾ ಅವರ ಸಂಸಾರದ ಕಡೆಗೆ ಸಂಪೂರ್ಣ ದುರ್ಲಕ್ಷವಾಗುತ್ತಿರುವಾಗ ಪ.ಪೂ. ಜೀಜೀ ಅವರು ಧೈರ್ಯದಿಂದ ತಮ್ಮ ಸಂಸಾರವನ್ನು ನಡೆಸಿದರು. ಬಹಳ ಕಷ್ಟ ಸಹಿಸಿದರು. ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಅವರು ತಮ್ಮ ಮಕ್ಕಳನ್ನು ಬೆಳೆಸಿದರು.

ಇಂತಹ ಸ್ಥಿತಿಯಲ್ಲಿ ಸಹ ಅವರು ಎಲ್ಲಾ ಶಿಷ್ಯರನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು. ನಮಗೆ ಬಹಳ ವರ್ಷ ಅವರ ಪ್ರೀತಿಯ ಸಹವಾಸ ಲಭಿಸಿದೆ. ಪ.ಪೂ. ಬಾಬಾ ಅವರ ಎಲ್ಲಾ ಭಕ್ತರನ್ನು ಅವರು ವಾತ್ಸಲ್ಯಭಾವದಿಂದ ಜೋಡಿಸಿದ್ದರು. ಪ.ಪೂ. ಜೀಜೀ ಅವರಂತಹ ಹಿರಿಯ ಗುರುಮಾತೆ ನಮಗೆ ಲಭಿಸಿದ್ದರು, ಇದು ಪ.ಪೂ. ಬಾಬಾ ಅವರ ಕೃಪೆಯಾಗಿದೆ. ಸನಾತನಕ್ಕೆ ಹೇಗೆ ಪ.ಪೂ. ಬಾಬಾ ಅವರ ಆಶೀರ್ವಾದ ಲಭಿಸಿತ್ತೋ ಹಾಗೆಯೇ ಪ.ಪೂ. ಜೀಜೀ ಅವರ ಆಶೀರ್ವಾದ ಕೂಡ ಲಭಿಸಿದೆ. ಅವರು ಹಲವುಬಾರಿ ಸನಾತನದ ಆಶ್ರಮಕ್ಕೆ ಬಂದಿದ್ದರು ಮತ್ತು ಅವರು ಸಾಧಕರನ್ನು ಶ್ಲಾಘಿಸಿ ಅವರಿಗೆ ಅಪಾರ ಆಶೀರ್ವಾದ ಸಹ ನೀಡಿದ್ದರು. ಅವರ ಕೃಪಛತ್ರದಡಿಯಲ್ಲಿ ಸನಾತನದ ಕಾರ್ಯ ದಿನೇ ದಿನೇ ವೃದ್ಧಿಸುತ್ತಿದೆ.

ಈಗ ಸ್ಥೂಲದಲ್ಲಿ ಅವರ ಸಹವಾಸ ಲಭಿಸದಿದ್ದರೂ ಅವರ ಪ್ರೀತಿಯ ನೆನಪು ಎಂದಿಗೂ ಸ್ಮರಣೆಲ್ಲಿರುವುದು.

ಇಂತಹ ಶ್ರೇಷ್ಠ ಗುರುಮಾತೆಯ ಚರಣಗಳಲ್ಲಿ ಶತಶಃ ಪ್ರಣಾಮ ಮತ್ತು ಕೃತಜ್ಞತೆ !

– ಡಾ. ಜಯಂತ ಅಠವಲೆ (೧೮.೯.೨೦೨೨)