ಉತ್ತರ ಪ್ರದೇಶ ಸರಕಾರದ ಮದರಸಾ ಸಮೀಕ್ಷೆಯ ಪ್ರಕ್ರಿಯೆಗೆ ದಾರೂಲ್ ಉಲುಮ ದೇವಬಂದದ ಬೆಂಬಲ

ಮೌಲಾನ ಅರ್ಷದ ಮದನಿ

ದೇವಬಂದ – ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮದರಸಾ ಸಮೀಕ್ಷೆಯ ಸಂದರ್ಭದಲ್ಲಿ ಇಸ್ಲಾಮಿಕ್ ಶಿಕ್ಷಣದ ಮುಖ್ಯ ಕೇಂದ್ರ ಇರುವ ದಾರೂಲ್ ಉಲುಮ ದೇವಬಂದನಿಂದ ಇತ್ತಿಚೆಗೆ ಮಹತ್ವದ ಸಭೆ ನೆವೇರಿತು. ಈ ಸಭೆಯಲ್ಲಿ ದಾರೂಲ ಉಲುಮ ದೇವಬಂದ ಸರಕಾರದ ಮದರಸಾಗಳ ಸಮೀಕ್ಷೆಯ ಪ್ರಕ್ರಿಯೆಗೆ ಬೆಂಬಲ ನೀಡಿದೆ. ಇದರ ನಂತರ ಉತ್ತರಪ್ರದೇಶದಲ್ಲಿನ ಮದರಸ ಸಮೀಕ್ಷೆಯ ಮೇಲೆ ರಾಜಕೀಯ ಕಡಿಮೆ ಆಗುವ ಅಪೇಕ್ಷೆ ಇದೆ. ಸರಕಾರಿ ಭೂಮಿಯ ಮೇಲೆ ಕಟ್ಟಲಾಗಿರುವ ಮದರಸಾ ಕಾನೂನುಬಾಹಿರ ಇರುವುದು ದಾರೂಲ್ ಉಲುಮ ಬೈಠಕಿನಲ್ಲಿ ಸ್ಪಷ್ಟಪಡಿಸಿದೆ.

೧. ಮದರಸಾ ಸಮೀಕ್ಷೆಯ ವಿಷಯವಾಗಿ ನಡೆದಿರುವ ಸಭೆಯಲ್ಲಿ ‘ಆಲ್ ಇಂಡಿಯಾ ಜಮೀತ್ ಉಲೇಮಾ-ಎ-ಹಿಂದ’ ನ ಅಧ್ಯಕ್ಷ ಮೌಲಾನ (ಇಸ್ಲಾಮಿ ಅಭ್ಯಾಸಕ) ಅರ್ಷದ ಮದನಿ ಇವರು ಪತ್ರಕರ್ತರ ಸಭೆಯಲ್ಲಿ, ಸರಕಾರವು ಮದರಸಾ ಸಮೀಕ್ಷೆಯ ವಿಷಯವಾಗಿ ನೀಡಿರುವ ಆದೇಶ ಯೋಗ್ಯವಾಗಿದೆ. ಅದರಲ್ಲಿ ಯಾವುದೇ ಕೊರತೆ ಇಲ್ಲ. ಆದ್ದರಿಂದ ಸರಕಾರಕ್ಕೆ ಬೆಂಬಲ ನೀಡಬೇಕು. ದಾರೂಲ ಉಲುಮ ಸರಕಾರದ ಶೈಕ್ಷಣಿಕ ಉದ್ದೇಶದ ಜೊತೆ ಇದೆ, ಎಂದು ಹೇಳಿದರು.

೨. ದೇವಬಂದಿನ ರಶೀದ್ ಮಸೀದಿಯಲ್ಲಿ ತೆಗೆದುಕೊಳ್ಳಲಾಗಿರುವ ಈ ಸಭೆಯಲ್ಲಿ ರಾಜ್ಯಾದ್ಯಂತ ಇರುವ ದಾರೂಲ್ ಉಲುಮ ದೆವಬಂದ ಜೊತೆ ಇರುವ ಸುಮಾರು ೨೫೦ ಮದರಸಾದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಛಾಯಾ ಚಿತ್ರಕಾರರಿಗೆ ಪ್ರವೇಶ ನೀಡಲಾಗಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರ ದಾರೂಲ್ ಉಲುಮನಿನ ವತಿಯಿಂದ ಪತ್ರಿಕಾಗೋಷ್ಠೀ ನಡೆಸಿ ಪತ್ರಕರ್ತರಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು.