ಎನ್.ಐ.ಎ.ಯು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಸಿರುವ ದಾಳಿಯಲ್ಲಿ ಪಿ.ಎಫ್.ಐ. ನ ಭಯೋತ್ಪಾದಕರ ಬಂಧನ !

ಭಾಗ್ಯನಗರ (ತೆಲಂಗಾಣ) – ರಾಷ್ಟ್ರೀಯ ತನಿಖಾ ದಳ ಎಂದರೆ ಎನ್.ಐ.ಎ. ಯಿಂದ ಸೆಪ್ಟೆಂಬರ್ ೧೮ ರಂದು ಆಂಧ್ರಪ್ರದೇಶ ಹಾಗೂ ತೆಲಂಗಾಣ ಈ ರಾಜ್ಯಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಇಲಾಖೆಯ ಅಧಿಕಾರಿಗಳು ಹಿಂಸೆಗೆ ಪ್ರಚೋದಿಸುವುದು, ಕಾನೂನ ಬಾಹಿರ ಕೃತ್ಯ ಮಾಡುವುದು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿತ ಆರೋಪಿಗಳ ವಿಚಾರಣೆಗಾಗಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಪದಾಧಿಕಾರಿಯನ್ನು ಬಂಧಿಸಿದರು.

೧. ಸಿಕ್ಕಿರುವ ಮಾಹಿತಿಯ ಪ್ರಕಾರ ಎನ್.ಐ.ಎ.ನ ಒಟ್ಟು ೨೩ ಪಥಕಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿನ ಕೆಲವು ಜಿಲ್ಲೆಯಲ್ಲಿ ದಾಳಿ ನಡೆಸಲಾಯಿತು.
೨. ಆಂಧ್ರ ಪ್ರದೇಶದಲ್ಲಿನ ಕರ್ನೂಲ್, ಗುಂಟೂರ್, ನೆಲ್ಲೂರ್ ಮತ್ತು ನಂದ್ಯಾಲ್ ಹಾಗೂ ತೆಲಂಗಾಣದಲ್ಲಿನ ಇಂದುರ (ನಿಜಾಮಾಬಾದ್) ಈ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
೩. ಈ ಮೊದಲು ಪಿ.ಎಫ್.ಐ.ನ ಜಿಲ್ಲಾ ಆಹ್ವಾನಿತರಾದ ಶಾದುಲ್ಲಾಹ ಮತ್ತು ಸದಸ್ಯ ಮಹಮ್ಮದ್ ಇಮ್ರಾನ್, ಮಹಮ್ಮದ್ ಅಬ್ದುಲ್ ಮೊಬಿನ ಇವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಿ.ಎಫ್.ಐ.’ ಅನೇಕ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ.‘ಪಿ.ಎಫ್.ಐ.’ಗೆ ಭಾರತವನ್ನು ೨೦೪೭ ರಲ್ಲಿ ಇಸ್ಲಾಮಿ ರಾಷ್ಟ್ರವೆಂದು ಘೋಷಣೆ ಮಾಡುವುದಿದೆ. ಆದ್ದರಿಂದ ಈಗ ಕೇವಲ ಕ್ರಮ ಕೈಗೊಳ್ಳುವದು ಅಷ್ಟೇ ಸೀಮಿತವಾಗಿ ಉಳಿಯದೆ ಪಿ.ಎಫ್.ಐ. ಮೇಲೆ ಶಾಶ್ವತವಾಗಿ ನಿಷೇಧ ಹೇರಬೇಕು ! ನಿಷೇಧ ಹೇರಿರುವ ‘ಸಿಮಿ’ ಹಾಗೆ ಅದರ ಮರೆಯಲ್ಲಿನ ಕಾರ್ಯಾಚರಣೆ ನಡೆಯುವುದಿಲ್ಲ ಅದಕ್ಕಾಗಿ ಸಹ ಉಪಾಯ ಯೋಜನೆ ಮಾಡುವುದು ಅವಶ್ಯಕವಾಗಿದೆ !

 

ಎನ್.ಐ.ಎ.ನಿಂದ ದಾಳಿ ಮಾಡುವಾಗ ಸ್ಥಳೀಯರಿಂದ ವಿರೋಧ !

ನಂದ್ಯಾಲ್ ಮತ್ತು ಕರ್ನೂಲ್ ಈ ಪ್ರದೇಶದಲ್ಲಿ ಎನ್.ಐ.ಎ. ನಿಂದ ಕಾರ್ಯಾಚರಣೆ ನಡೆಸುವಾಗ ಸ್ಥಳೀಯರು ಅದನ್ನು ವಿರೋಧಿಸಿದರು. ಕಾರ್ಯಾಚರಣೆಯ ವಿರುದ್ಧ ಘೋಷಣೆ ಸಹ ಕೂಗಿದರು.

ಸಂಪಾದಕೀಯ ನಿಲುವು

ಜಿಹಾದಿ ಪಿ.ಎಫ್.ಐ.ನ ಬೆಂಬಲಿಗರ ವಿಚಾರಣೆ ನಡೆಸಿ ಅವರ ಮೇಲೆ ಕೂಡ ಕ್ರಮ ಕೈಗೊಳ್ಳುವುದು ಅವಶ್ಯಕ !