ಅನಾಥಾಶ್ರಮದಲ್ಲಿನ ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಗರ್ಭಿಣಿ ಮಾಡಿದ ಪಾದ್ರಿಯ ಬಂಧನ

ಚೆನ್ನೈ (ತಮಿಳನಾಡು) – ತಮಿಳನಾಡಿನ ಮಾಮಲ್ಲಾಪುರದಲ್ಲಿನ ವಾಯಾಲುರನಲ್ಲಿರುವ ಅನಾಥಾಶ್ರಮ ನಡೆಸುವ ಪಾದ್ರಿ ಚಾರ್ಲ್ಸ (ವಯಸ್ಸು ೫೮ ವರ್ಷ ) ಈತನು ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಹುಡುಗಿಯ ಪ್ರಸುತಿಯ (ಹೇರಿಗೆಯ)ನಂತರ ಚಾರ್ಲ್ಸ ಪರಾರಿಯಾಗಿದ್ದನು. ಒಂದುವರೆ ವರ್ಷ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಚಾರ್ಲ್ಸ ನಡೆಸುತ್ತಿರುವ ಅನಾಥಾಶ್ರಮದಲ್ಲಿ ಈ ಹುಡುಗಿ ವಾಸವಾಗಿದ್ದಳು. ಅವನು ಆಕೆಯನ್ನು ಆಕೆಯ ಮಗುವನ್ನು ಸಾಕುವನು, ಎಂದು ಆ ಹುಡುಗಿಗೆ ನಂಬಿಸಿದ್ದನು. ಆದರೆ ಅವನು ಹೆರಿಗೆಯ ನಂತರ ಆ ಹುಡುಗಿಯನ್ನು ರಾಜಮಂಗಲಮ್‌ಗೆ ಕಳುಹಿಸಿದನು ಮತ್ತು ನಂತರ ಆಕೆಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ನಂತರ ಅವನು ಪರಾರಿಯಾಗಿದ್ದನು. ಈ ಬಗ್ಗೆ ಹುಡುಗಿ ನೀಡಿರುವ ದೂರಿನ ನಂತರ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

ಸಂಪಾದಕೀಯ ನಿಲುವು

ಇಂತಹ ಕಾಮುಕರ ವಾರ್ತೆ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತಾರೆ ಮತ್ತು ಹಿಂದೂ ಸಾಧುಸಂತರ ಮೇಲಿನ ಆರೋಪಗಳು ವಾರ್ತೆಯಲ್ಲಿ ಹೆಚ್ಚೆಚ್ಚು ಪ್ರಸಾರ ಮಾಡುತ್ತಾರೆ !