ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲ ಖಾನ್‌ಟಿ ಬಂಧನ

  • ಬಂಧನದ ಸಮಯದಲ್ಲಿ ಸಂಬಂಧಿಕರು ಮತ್ತು ಬೆಂಬಲಿಗರಿಂದ ಪೊಲೀಸರ ಮೇಲೆ ದಾಳಿ

  • ೨೪ ಲಕ್ಷ ರೂಪಾಯಿ ಮತ್ತು ೨ ಪಿಸ್ತೂಲಗಳು ವಶಪಡಿಸಿಕೊಳ್ಳಲಾಗಿದೆ.

ನವದೆಹಲಿ – ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಇವರನ್ನು ಭ್ರಷ್ಟಾಚರ ನಿಗ್ರಹ ದಳ ಬಂದಿಸಿದೆ. ಬಂಧನದ ಸಮಯದಲ್ಲಿ ಅವರ ಮನೆಯ ಸಹಿತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಇದರಲ್ಲಿ ಎರಡು ಬಂದುಕಗಳು ಮತ್ತು ೨೪ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಖಾನ ಅವರನ್ನು ಬಂಧಿಸುವ ಸಮಯದಲ್ಲಿ ಅವರ ಸಂಬಂಧಿಕರು ಮತ್ತು ಬೆಂಬಲಗರಿಂದ ದಾಳಿ ನಡೆಸಲಾಯಿತು. ಆದ್ದರಿಂದ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಯಿತು. ದಾಂಧಲೆ ನಡೆಸುವವರ ವಿರುದ್ಧ ದೂರು ದಾಖಲಿಸಲಾಗಿದೆ. ಅವರನ್ನು ಕೂಡ ಬಂಧಿಸಲಾಗುವುದು.

೧. ಅಮಾನತುಲ್ಲಾ ಖಾನ್ ಇವರ ನಿಕಟವರ್ತಿ ಕೌಶರ್ ಇಮಾಮ್ ಸಿದ್ದಿಕಿ ಇವರಿಂದ ಒಂದು ಬಂದುಕು, ಕೆಲವು ಕಾರ್ಟ್ರೆಜ್ ಮತ್ತು ೧೨ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ ಮತ್ತೊಬ್ಬರಿಂದ ಹಮೀದ್ ಅಲಿ ಖಾನ್ ಇವರಿಂದ ೧ ಬಂದೂಕು ಮತ್ತು ೧೨ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

೨. ಅಮಾನತುಲ್ಲಾ ಖಾನ್ ದೆಹಲಿಯ ವಕ್ಫ ಬೋರ್ಡನ ಅಧ್ಯಕ್ಷ ಇರುವಾಗ ೩೨ ಜನರನ್ನು ಕಾನೂನು ಉಲ್ಲಂಘನೆ ನಡೆಸಿ ನೇಮಕಗೊಳಿಸಿದ್ದರು. ಹಾಗೂ ಬೋರ್ಡನ ಕೆಲವು ಆಸ್ತಿ ಬಾಡಿಗೆ ಕೂಡ ನೀಡಿದ್ದರು, ಎಂದು ಆರೋಪವಿದೆ. ಹಾಗೂ ಬೋರ್ಡನ ಹಣದ ದುರುಪಯೋಗ ಕೂಡ ನಡೆದಿದೆ. ಇದರಲ್ಲಿ ಸರಕಾರ ನೀಡಿರುವ ಅನುದಾನ ಕೂಡ ಒಳಗೊಂಡಿದೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸ್ಥಾಪಿಸಲಾಗಿದ್ದ ಪಕ್ಷದ ಶಾಸಕರೇ ಭ್ರಷ್ಟಾಚಾರಿ ಆಗಿರುವುದು ಗಮನದಲ್ಲಿಟ್ಟುಕೊಳ್ಳಿರಿ !

ಮತಾಂಧರನ್ನು ಬಂಧಿಸಿದ ನಂತರ ಹೆಚ್ಚಿನ ಸಲ ಪೊಲೀಸರ ಮೇಲೆ ದಾಳಿ ನಡೆಯುತ್ತದೆ, ಈ ವಿಷಯದ ಬಗ್ಗೆ ಯಾವುದೇ ಜಾತ್ಯತೀತ ಪಕ್ಷ, ನಾಯಕರು ಅಥವಾ ಸಂಘಟನೆಗಳು ಎಂದು ಮಾತನಾಡುವುದಿಲ್ಲ !