ಲಂಡನ್ – ವಿಶ್ವಾದ್ಯಂತ ‘ಸ್ಮಾರ್ಟ್ ಫೋನ್’ಗಳ ಬಳಕೆ ಹೆಚ್ಚುತ್ತಿದ್ದು, ೯ ರಿಂದ ೧೯ ವರ್ಷದೊಳಗಿನ ಮಕ್ಕಳು ಇದನ್ನು ಹೆಚ್ಚು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಯುನೈಟೆಡ್ ಕಿಂಗ್‌ಡಮ್‌ನ ‘ಆಪಕಾಮ್’ನ ವರದಿಯ ಪ್ರಕಾರ, ಬ್ರಿಟನ್‌ನ ಶೇ. ೯೧ ರಷ್ಟು ಮಕ್ಕಳು ೧೧ ವರ್ಷ ವಯಸ್ಸಿನೊಳಗೆ ತಮ್ಮದೇ ಆದ ‘ಸ್ಮಾರ್ಟ್‌ಫೋನ್’ ಹೊಂದಿದ್ದಾರೆ. ಈ ಮಕ್ಕಳು ೧೯ ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಅವರಲ್ಲಿ ಶೇಕಡಾ ೬೫ ರಷ್ಟು ಜನರು ಖಿನ್ನತೆಗೆ ಬಲಿಯಾಗುತ್ತಾರೆ.
೧. ಈ ವರದಿಯ ಪ್ರಕಾರ, ೧೯ ಯುರೋಪಿಯನ್ ದೇಶಗಳಲ್ಲಿ ೧೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. ೮೦ ರಷ್ಟು ಮಕ್ಕಳು ಪ್ರತಿದಿನ ಇಂಟರ್‌ನೆಟ್ ಅನ್ನು ಬಳಸುತ್ತಾರೆ. ೧೯ ನೇ ವಯಸ್ಸಿಗೆ ಶೇ. ೯೦ ರಷ್ಟು ಹದಿಹರೆಯದವರು ತಮ್ಮದೇ ಆದ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದಾರೆ.
೨. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾ. ಎಮಿ ಒರ್ಬನ್ ಇವರು, ೮ ವರ್ಷ ವಯಸ್ಸಿನ ಮಕ್ಕಳು ಸಹ ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಆದ ಖಾತೆಗಳನ್ನು ತೆರೆಯುತ್ತಾರೆ. ಅವರಿಂದ ಆನ್‌ಲೈನ್‌ನಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
೩. ಒರ್ಬನ್ ಪ್ರಕಾರ, ‘ಸ್ಮಾರ್ಟ್‌ಫೋನ್’ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ೧ ಸಾವಿರದ ೭೦೦ ಮಕ್ಕಳ ಅಧ್ಯಯನದಲ್ಲಿ, ಸಾಮಾಜಿಕ ಮಾಧ್ಯಮವನ್ನು ಬಳಸಲು ಪ್ರಾರಂಭಿಸಿದ ೧೧ ರಿಂದ ೧೩ ವರ್ಷ ವಯಸ್ಸಿನ ಹುಡುಗಿಯರು ಮತ್ತು ೧೪ ರಿಂದ ೧೫ ವರ್ಷ ವಯಸ್ಸಿನ ಹುಡುಗರು ನಂತರದ ಜೀವನದಲ್ಲಿ ಕಡಿಮೆ ತೃಪ್ತಿ ಹೊಂದಿದ್ದಾರೆಂದು ಅವರು ಹೇಳಿದರು. ಇನ್ನೊಂದೆಡೆ ಯಾರು ಸಾಮಾಜಿಕ ಮಾಧ್ಯಮ ಬಳಸುವುದಿಲ್ಲ ಅವರು ಹೆಚ್ಚು ತೃಪ್ತರಾಗಿರುವುದು ಕಂಡುಬಂದಿದೆ ಎಂದು ಹೇಳಿದರು.
ಸ್ಮಾರ್ಟ್‌ಫೋನ್ ಅಗತ್ಯವಿದೆ, ಆದರೆ ಪೋಷಕರ ನಿಯಂತ್ರಣ ಅಗತ್ಯವಿದೆ ! – ಪ್ರಾ. ಸೋನಿಯಾ ಲಿವಿಂಗ್ಸ್ಟೋನ್‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಪ್ರಾ. ಸೋನಿಯಾ ಲಿವಿಂಗ್ಸ್ಟೋನ್ ಇವರು, ಇಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಇಂಟರನೆಟ್ ಮತ್ತು ಸ್ಮಾರ್ಟ್ಫೋನ್‌ಗಳು ಅತ್ಯಗತ್ಯ. ಆದ್ದರಿಂದ, ಮಕ್ಕಳು ಸಮಾಜದೊಂದಿಗೆ ಹಿಸದಾಗಿ ಸಂಪರ್ಕ ಸಾಧಿಸಬಹುದು. ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಬಹುದು; ಆದರೆ ಪೋಷಕರು ಅದನ್ನು ನಿಯಂತ್ರಿಸುವುದು ಮುಖ್ಯವಾಗಿರುತ್ತದೆ. |
ಸಂಪಾದಕೀಯ ನಿಲುವು
|