ಶಿಕ್ಷಣವ್ಯವಸ್ಥೆಯಲ್ಲಿ ಹಿಂದುತ್ವದ ಶಿಕ್ಷಣದ ಸಮಾವೇಶವಾಗಬೇಕು ! – ರಾಷ್ಟ್ರೀಯ ಸ್ವಯಂಸೇವಕ ಸಂಘ

ನ್ಯಾಯಾಲಯದಲ್ಲಿ ಭಾರತೀಯ ಭಾಷೆಯಲ್ಲಿ ತೀರ್ಪು ನೀಡಬೇಕು, ಎಂಬ ಬೇಡಿಕೆಯೂ ಇದೆ

ರಾಯಪುರ (ಛತ್ತೀಸ್‌ಗಡ) – ಅಮೇರಿಕಾ ಮತ್ತು ಬ್ರಿಟನ್ ಈ ದೇಶಗಳಲ್ಲಿ ಹಿಂದುತ್ವದ ಶಿಕ್ಷಣವನ್ನು ಕೊಡಲಾಗುತ್ತದೆ. ಆದ್ದರಿಂದ ಅದನ್ನು ಭಾರತದಲ್ಲಿಯೂ ಕೊಡಬೇಕು. ‘ಹಿಂದುತ್ವದ ವಿಷಯದಲ್ಲಿ ಯೋಗ್ಯ ಮಾಹಿತಿ ಏನಿದೆ ?’, ಎಂಬುದು ಶಿಕ್ಷಣವ್ಯವಸ್ಥೆಯಲ್ಲಿ ಸಮಾವೇಶವಾಗಬೇಕು. ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ೩ ದಿನಗಳ ಸಮನ್ವಯ ಸಭೆಯಲ್ಲಿ ಬೇಡಿಕೆಯನ್ನು ಮಾಡಲಾಯಿತು. ಈ ಸಭೆಯಲ್ಲಿ ಸರ್ ಸಂಘಚಾಲಕ ಡಾ. ಮೋಹನ ಭಾಗವತರ ಉಪಸ್ಥಿತಿಯಲ್ಲಿ ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕದಂತಹ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಯಿತು. ಸಂಘದ ಎಲ್ಲ ೩೬ ಸಂಘಟನೆಗಳೊಂದಿಗೆ ಚರ್ಚೆ ಮಾಡಿದನಂತರ ದೇಶದಲ್ಲಿ ಸಕಾರಾತ್ಮಕ ಬದಲಾವಣೆಯ ಕಾರ್ಯವಾಗಬೇಕು, ಎಂಬುದರ ಬಗ್ಗೆ ಒಮ್ಮತವಾಯಿತು. ಅದೇ ರೀತಿ ಸ್ಥಳೀಯ ಮಟ್ಟದಲ್ಲಿ ಗ್ರಾಮ ಆಧಾರಿತ ಅರ್ಥವ್ಯವಸ್ಥೆ ಪುನಃ ಆರಂಭಿಸುವುದರ ಬಗ್ಗೆ ಚರ್ಚೆಯಾಯಿತು.

ಸಂಘದ ಸಹಸರಕಾರ್ಯವಾಹ ಡಾ. ಮನಮೋಹನ ವೈದ್ಯ ಇವರು ಸಭೆಯ ಬಗ್ಗೆ ಮಾಹಿತಿಯನ್ನು ಕೊಡುವಾಗ, ನ್ಯಾಯಾಲಯಗಳಲ್ಲಿ ಭಾರತೀಯ ಭಾಷೆಗಳಲ್ಲಿ ಕಾರ್ಯ ನಡೆಯಬೇಕು. ತೀರ್ಪು ಭಾರತೀಯ ಭಾಷೆಗಳಲ್ಲಿ ಇರಬೇಕು. ‘ವಕೀಲರು ಮತ್ತು ನ್ಯಾಯಾಧೀಶರು ಆಂಗ್ಲದಲ್ಲಿ ಏನು ಮಾತನಾಡುತ್ತಾರೆ ?’, ಎಂಬುದು ಜನರಿಗೆ ತಿಳಿಯುವುದಿಲ್ಲ. ‘ರಾಷ್ಟ್ರವೆಂದರೆ ಸಮಾಜ ಆಗಿರುತ್ತದೆ. ಆದ್ದರಿಂದ ಇಲ್ಲಿನ ಸಮಾಜ ಹಿಂದೂ ಆಗಿದೆ’, ಎಂದು ಅವರು ಹೇಳಿದರು.