ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪೊಲೀಸರ ಭಯದಿಂದ ಬಾವಿಗೆ ಹಾರಿ ಸಾವನ್ನಪ್ಪಿದ ಹಿಂದೂ ಯುವಕ !

ಯುವಕನ ಸಾವನ್ನು ‘ಆತ್ಮಹತ್ಯೆ’ ಎಂದು ನೋಂದಾಯಿಸಿದ ಪೊಲೀಸರು !

ಹೈದರಾಬಾದ್ (ಪಾಕಿಸ್ತಾನ) : ಇಲ್ಲಿಯ ಕಾದಿರ್ ಎಂಬ ಪೊಲೀಸ್ ಪೇದೆಯ ಭಯದಿಂದ ಆಲಂ ಕೊಹ್ಲಿ ಎಂಬ ಹಿಂದೂ ಯುವಕನು ಬಾವಿಗೆ ಹಾರಿದ್ದರಿಂದ ಮುಳುಗಿ ಪ್ರಾಣ ಬಿಟ್ಟನು. ಆಲಂ ಸಂತ್ರಸ್ತೆಯ ಕುಟುಂಬವು ಕಾದಿರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ ಪೊಲೀಸರು ಮಾತ್ರ ಆಲಂ ಸಾವು ‘ಆತ್ಮಹತ್ಯೆ’ ಎಂದು ದಾಖಲಿಸಿದ್ದಾರೆ ವಾಸ್ತವವಾಗಿ, ಕಾದಿರನು ಆಲಂನ ಹಿಂದೆ ಓಡುತ್ತಿರುವುದನ್ನು ಎರಡು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಈ ಘಟನೆಯು ಸೆಪ್ಟೆಂಬರ್ ೮ ರಂದು ನಡೆದಿದ್ದು, ಸಿಂಧ್ ಪ್ರಾಂತ್ಯವು ಟಂಡೋ ಮೊಹಮ್ಮದ್ ಖಾನ್ ಅವರ ಪ್ರದೇಶಕ್ಕೆ ಸೇರಿದೆ.

ಸಂತ್ರಸ್ತ ಹಿಂದೂ ಕುಟುಂಬ ಹೇಳಿಕೆಯಂತೆ, ಘಟನೆಯ ದಿನ ಆಲಂ ಕೊಹ್ಲಿ ಮತ್ತು ಕಾದಿರ್ ಆಸ್ಪತ್ರೆಯಲ್ಲಿ ಜಗಳವಾಯಿತು ಅದು ಅವಾಚ್ಯ ಪದಗಳಲ್ಲಿ ರೂಪಾಂತರವಾಯಿತು. ಇದಾದ ನಂತರ ಕಾದಿರ್ ಆಲಂನನ್ನು ಕೊಲ್ಲಲು ಓಡಿದನು. ಅವನಿಂದ ತನ್ನನ್ನು ರಕ್ಷಿಸಿಕೊಳ್ಳಲು ಆಲಂ ಹತ್ತಿರದ ಬಾವಿಗೆ ಹಾರಿದನು. ಆಲಂಗೆ ಈಜಲು ಬಾರದಿರುವುದರಿಂದ ಮುಳುಗಿ ಸಾವನ್ನಪ್ಪಿದನು. ಈ ಘಟನೆಯನ್ನು ವಿರೋಧೀಸಲು ಸಂತ್ರಸ್ತ ಹಿಂದೂ ಕುಟುಂಬವು ಹೈದರಾಬಾದ್-ಸುಜ್ವಲ್ ರಸ್ತೆಯನ್ನು ತಡೆದು ಆರೋಪಿ ಕಾದಿರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಸರಕಾರ ಪಕ್ಷ, ಪೊಲೀಸರು, ಆಡಳಿತ ಮತ್ತು ಅಲ್ಲಿನ ಮುಸಲ್ಮಾನ ಜನರು ಹಿಂದೂಗಳ ವಿರುದ್ಧವಾಗಿದೆ. ಅಲ್ಲಿನ ಅಸಹಾಯಕ ಹಿಂದೂಗಳಿಗೆ ಯಾರೂ ಇಲ್ಲದ್ದರಿಂದ, ಅವರ ಮೇಲೆ ನಿರಂತರವಾಗಿ ಆಕ್ರಮಣಕ್ಕೆ ನಡೆಯುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇದನ್ನು ತಡೆಯುವ ಏಕೈಕ ಪರ್ಯಾಯವೆಂದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಎಂಬುವುದನ್ನು ತಿಳಿಯಿರಿ !