ಅಮೇಠಿ (ಉತ್ತರಪ್ರದೇಶ) ಇಲ್ಲಿಯ ಅಕ್ರಮ ಮದರಸಾವನ್ನು ನೆಲಸಮಗೊಳಿಸಿದೆ ಸರಕಾರ !

ಅಮೇಠಿ (ಉತ್ತರಪ್ರದೇಶ) – ಇಲ್ಲಿಯ ಸರಕಾರಿ ಗೋಮಾಳಾದ ಭೂಮಿಯ ಮೇಲೆ ಕಟ್ಟಲಾಗಿರುವ ಅಕ್ರಮ ಮದರಸಾವನ್ನು ಸರಕಾರದಿಂದ ನೆಲಸಮ ಮಾಡಲಾಯಿತು. ಇದನ್ನು ಹಸನ ಎಂಬ ವ್ಯಕ್ತಿ ನಡೆಸುತ್ತಿದ್ದನು. ಆತನೇ ಈ ಮದರಸ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು; ಆದರೆ ಅವರು ಅದನ್ನು ತೆರವುಗೊಳಿಸದೇ ಇರುವುದರಿಂದ ಸರಕಾರ ಅದನ್ನು ನೆಲಸಮ ಮಾಡಿತು. ಹಾಗೂ ಅವನಿಗೆ ೨ ಲಕ್ಷದ ೨೪ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಯಿತು. ೧೯೯೭ ರಲ್ಲಿ ಇದು ಕಟ್ಟಲಾಗಿತ್ತು. ಹಸನ್ ಇವರ ಪ್ರಕಾರ, ಗ್ರಾಮ ಸಭೆಯು ಮದರಸಾ ಕಟ್ಟುವ ಪ್ರಸ್ತಾಪವನ್ನು ಸಮ್ಮತಿಸಿತ್ತು ಮತ್ತು ಗ್ರಾಮಸ್ಥರು ನೀಡಿರುವ ದೆಣಗಿಯಿಂದ ಅದನ್ನು ಕಟ್ಟಲಾಗಿತ್ತು. ಇಲ್ಲಿ ೧೫೦ ಮಕ್ಕಳು ಕಲಿಯುತ್ತಿದ್ದರು.

ಸಂಪಾದಕೀಯ ನಿಲುವು

ಅಕ್ರಮ ಕಟ್ಟಡ ಕಟ್ಟುವವರೆಗೆ ಭಾರತದಲ್ಲಿನ ಸರಕಾರ ಯಾವಾಗಲು ನಿದ್ದೆ ಮಾಡುತ್ತಿರುತ್ತದೆ !