ವಿದ್ಯಾರ್ಥಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಪ್ಯಾಂಟ್‌ನಲ್ಲಿ ಮೂತ್ರವಿಸರ್ಜನೆ ಮಾಡಿಸಿದ ೪ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು !

ಕಾಮೋಟೆ (ನವ ಮುಂಬಯಿ)ಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನಲ್ಲಿ ನಡೆದ ಆಘಾತಕಾರಿ ಘಟನೆ !

ಕಾಮೋಟೆ (ನವ ಮುಂಬಯಿ) – ಇಲ್ಲಿಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸೇರಿ ಕಿರಿಯ ವಿದ್ಯಾರ್ಥಿಗೆ ಕಿರುಕುಳ(ರ‍್ಯಾಗಿಂಗ್) ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಕಾಲೇಜಿನಲ್ಲಿ ದಾಖಲಿಸಿರುವ ದೂರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ೧೯ ವರ್ಷದ ವಿದ್ಯಾರ್ಥಿಗೆ ಮೊದಲು ಮದ್ಯಪಾನ ಮಾಡಿಸಿ ನಂತರ ತಮ್ಮದೇ ಪ್ಯಾಂಟ್‌ನಲ್ಲಿಯೇ ಮೂತ್ರವಿಸರ್ಜನೆ ಮಾಡುವಂತೆ ಬಲವಂತ ಮಾಡಿದರು (ವಿಕೃತಿಯ ಪರಿಸೀಮೆ ! – ಸಂಪಾದಕರು) ನಾಲ್ಕು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಮೇಲಿನ ಪ್ರಕರಣವು ಜುಲೈ ೨೦೨೨ ರಲ್ಲಿ ನಡೆದಿದೆ; ಆದರೆ ವಿದ್ಯಾರ್ಥಿಗಳು ಈ ಬಗ್ಗೆ ಯಾರಿಗೂ ಹೇಳಲಿಲ್ಲ. ಅವರು ಇತ್ತೀಚೆಗೆ ತಮ್ಮ ಹೆತ್ತವರಿಗೆ ತಿಳಿಸಿದರು.

ಸಂಪಾದಕೀಯ ನಿಲುವು

ಈ ರೀತಿ ಕಿರುಕುಳ ನೀಡುವ ಮುಂದಿನ ಪೀಳಿಗೆಯು ಹೇಗೆ ದೇಶದ ಭವಿಷ್ಯವನ್ನು ಸಾಕಾರಗೊಳಿಸುವರು ?