ಹಿಮಾಚಲ್ ಪ್ರದೇಶದಲ್ಲಿನ ಭಾಜಪ ಸರಕಾರದ ನಿರ್ಣಯ !
ಶೀಮ್ಲಾ (ಹಿಮಾಚಲಪ್ರದೇಶ) – ಹಿಮಾಚಲ ಪ್ರದೇಶದಲ್ಲಿನ ೩೩ ಮುಖ್ಯ ದೇವಸ್ಥಾನದಲ್ಲಿನ ೧೦ ಕ್ವಿಂಟಲ ಬಂಗಾರ ಮತ್ತು ೧೬೦ ಕ್ವಿಂಟಲ ಕ್ಕೂ ಹೆಚ್ಚಿನ ಬೆಳ್ಳಿ ಇದೆ . ಅದರಲ್ಲಿನ ಶೇ. ೫೦ ರಷ್ಟು ನಾಣ್ಯಗಳನ್ನು ತಯಾರಿಸಿ ಮಾರಾಟ ಮಾಡುವಂತೆ ರಾಜ್ಯದ ಭಾಜಪ ಸರಕಾರ ನಿರ್ಣಯ ತೆಗೆದುಕೊಂಡಿದೆ. ಇದಕ್ಕಾಗಿ ಕೇಂದ್ರ ಸರಕಾರದ ಖನಿಜ ಸಂಪನ್ಮೂಲಗಳ ವ್ಯಾಪಾರ ನಿಗಮದೊಂದಿಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಮುಂದಿನ ೫ – ೬ ತಿಂಗಳಿನಲ್ಲಿ ಈ ನಾಣ್ಯಗಳು ಉಪಲಬ್ಧವಾಗುವುದು, ಎಂದು ರಾಜ್ಯ ಸರಕಾರ ಹೇಳಿದೆ.
೧. ಉನಾದಲ್ಲಿನ ಚಿಂತಪೂರ್ಣಿ ದೇವಸ್ಥಾನದಲ್ಲಿ ಎಲ್ಲಕ್ಕಿಂತ ಹೆಚ್ಚು ೧.೯೮ ಕ್ವಿಂಟಲ ಬಂಗಾರ ಇದ್ದರೇ ಎಲ್ಲಕ್ಕಿಂತ ಹೆಚ್ಚು ೭೨.೯೨ ಕ್ವಿಂಟಲ ಬೆಳ್ಳಿ ನೈನಾದೇವಿ ದೇವಸ್ಥಾನದಲ್ಲಿದೆ.
೨. ದೇವಸ್ಥಾನದಲ್ಲಿರುವ ಶೇಕಡಾ ೫೦ ರಷ್ಟು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ತಯಾರಿಸಲಾಗುವುದು. ಶೇಕಡ ೨೦ ರಷ್ಟು ಬೆಳ್ಳಿ ಬಂಗಾರ ಧಾರ್ಮಿಕ ಸ್ಥಳದ ಟ್ರಸ್ಟ್ ಹಾಗೂ ದೇವಸ್ಥಾನದ ಕಾರ್ಯಕ್ಕಾಗಿ ಉಪಯೋಗಿಸಲಾಗುವುದು. ಉಳಿದಿರುವ ಬೆಳ್ಳಿ ಬಂಗಾರ ಕಾಯ್ದಿರಿಸಲಾಗುವುದು, ಎಂದು ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ರಾಕೇಶ ಕಂವರ ಇವರು ಹೇಳಿದರು.
ಸಂಪಾದಕೀಯ ನಿಲುವುದೇವಸ್ಥಾನದ ಸರಕಾರಿಕರಣವಾದರೆ ಹೀಗೆ ಆಗುತ್ತದೆ ! |