ಸ್ವಾಮಿ ಅವಿಮುಕ್ತೇಶ್ವರಾನಂದ ಜ್ಯೋತಿಷ ಪೀಠದ ಹಾಗೂ ಸ್ವಾಮಿ ಸದಾನಂದ ಶಾರದಾ ಪೀಠದ ಪ್ರಮುಖರು

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಉತ್ತರಾಧಿಕಾರಿ ಘೋಷಣೆ

ಎಡದಿಂದ ಸ್ವಾಮಿ ಸದಾನಂದ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ

ನರಸಿಂಹಪುರ (ಮಧ್ಯಪ್ರದೇಶ) – ಬದ್ರಿನಾಥದಲ್ಲಿನ ಜ್ಯೋತಿಷ ಪೀಠ ಮತ್ತು ದ್ವಾರಕಾದಲ್ಲಿನ ಶಾರದಾ ಪೀಠ ಇದರ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ದೇಹತ್ಯಾಗದ ನಂತರ ಇವರ ಉತ್ತರಾಧಿಕಾರಿಯ ಘೋಷಣೆ ಮಾಡಲಾಯಿತು. ಸ್ವಾಮಿ ಅವಿಮುಕ್ತೇಶ್ವರಾನಂದ ಇವರನ್ನು ಜ್ಯೋತಿಷ ಪೀಠದ ಹಾಗೂ ಸ್ವಾಮಿ ಸದಾನಂದ ಇವರನ್ನು ಶಾರದಾ ಪೀಠದ ಪ್ರಮುಖರೆಂದು ಘೋಷಿಸಲಾಗಿದೆ. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಪಾರ್ಥಿವ ಶರೀರದ ಎದುರು ಈ ಘೋಷಣೆ ಮಾಡಲಾಯಿತು.