ಬೀದಿ ನಾಯಿಗಳು ಕಚ್ಚಿದರೆ ಚಿಕಿತ್ಸೆಯ ಜವಾಬ್ದಾರಿ ಅದಕ್ಕೆ ಆಹಾರ ನೀಡುವವರದಾಗಿರುತ್ತದೆ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಬೀದಿ ನಾಯಿಗಳ ಸಮಸ್ಯೆಯ ಮೇಲೆ ಆದಷ್ಟು ಬೇಗನೆ ಪರಿಹಾರ ಹುಡುಕುವುದು ಅವಶ್ಯಕವಾಗಿದೆ.ಪ್ರಾಣಿಗಳ ಅಧಿಕಾರ ಮತ್ತು ನಾಗರಿಕರ ಸುರಕ್ಷೆ ಇದರಲ್ಲಿ ಸಮತೋಲನ ಕಾಯುವ ಅವಶ್ಯಕತೆಯಿದೆ. ಬೀದಿ ನಾಯಿಗಳಿಗೆ ಲಸಿಕೆ ಹಾಕುವುದು ಮತ್ತು ಅದು ಯಾರ ಮೇಲಾದರು ದಾಳಿ ನಡೆಸಿದರೆ ಅವರ ಚಿಕಿತ್ಸೆ ಖರ್ಚು ನೀಡುವ ಜವಾಬ್ದಾರಿ ಅದಕ್ಕೆ ಆಹಾರ ನೀಡುವವರದ್ದಾಗಿದೆ, ಎಂದು ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಮುಂಬೈ ಮತ್ತು ಕೇರಳದಲ್ಲಿನ ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ದಾಖಲಿಸಿರುವ ವಿವಿಧ ಮನವಿಗಳ ಮೇಲೆ ಒಟ್ಟಾಗಿ ವಿಚಾರಣೆ ನಡೆಸುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಮ್ಮಲ್ಲಿನ ಎಲ್ಲರೂ ಶ್ವಾನ ಪ್ರೇಮಿಗಳಾಗಿದ್ದಾರೆ. ನಾನು ಕೂಡ ನಾಯಿಗಳಿಗೆ ತಿಂಡಿ ನೀಡುತ್ತೇನೆ ಆದರೆ ಯಾರು ಈ ನಾಯಿಗಳ ಕಾಳಜಿ ತೆಗೆದುಕೊಳ್ಳಬೇಕೆನಿಸುತ್ತದೆ ಅವರಿಗೆ ಅದನ್ನು ನೀಡುವಂತಾಗಬೇಕು. ಆದರೆ ಚಿಪ (ಸಂಗಣಕಿಯ ಪ್ರಣಾಳಿ) ಹಚ್ಚಿ ಆ ನಾಯಿಯ ಮೇಲೆ ಗಮನ ಇಡುವುದಕ್ಕಿಂತ ಅದನ್ನು ಗುರುತಿಸುವುದು ಅವಶ್ಯಕವಾಗಿದೆ, ಈ ಅಭಿಪ್ರಾಯಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ನ್ಯಾಯಾಲಯವು ಹೇಳಿದೆ.

೨೦೧೯ ರಿಂದ ೨೦೨೧ ನೇ ಇಸ್ವಿಯ ಸಮಯದಲ್ಲಿ ಪ್ರಾಣಿಗಳಿಂದ ಒಂದುವರೆ ಕೋಟಿ ಜನರು ಕಚ್ಚಿಸಿಕೊಂಡಿದ್ದಾರೆ.

೨೦೧೯ ನೇ ಇಸ್ವಿಯಲ್ಲಿ ಉಪಲಬ್ಧವಿರುವ ಅಂಕಿಅಂಶಗಳಿಗನುಸಾರ ಪ್ರಾಣಿಗಳು ದೇಶದಲ್ಲಿನ ಒಂದೂವರೆ ಲಕ್ಷ ಜನರಿಗೆ ಕಚ್ಚಿರುವ ನೋಂದಣಿ ಇದೆ.೨೦೧೯ ನೇ ಇಸ್ವಿಯ ಒಂದೇ ವರ್ಷದಲ್ಲಿ ದೇಶದಲ್ಲಿನ ಪ್ರಾಣಿಗಳು ೭೨ ಲಕ್ಷ ೭೭ ಸಾವಿರ ೫೨೩ ಜನರಿಗೆ ಕಚ್ಚಿರುವ ನೋಂದಣಿ ಇದೆ.೨೦೨೦ನೇ ಇಸ್ವಿಯಲ್ಲಿ ಈ ಸಂಖ್ಯೆ ಕಡಿಮೆಯಾಗಿ ೪೬ ಲಕ್ಷ ೩೩ ಸಾವಿರ ೪೯೩ ವರೆಗೆ ಕಡಿಮೆಯಾಗಿತ್ತು, ಹಾಗೂ ೨೦೨೧ ನೇ ಇಸ್ವಿಯಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಿ ಅದು ೧೭ ಲಕ್ಷ ೧ ಸಾವಿರ ೧೩೩ ಆಗಿತ್ತು. ಈ ವರ್ಷದ ಮೊದಲು ಏಳು ತಿಂಗಳಿನಲ್ಲಿ ೧೪ ಲಕ್ಷ ೫೦ ಸಾವಿರ ಪ್ರಕರಣಗಳ ದಾಖಲಿಸಲಾಗಿದೆ.

ದೇಶದಲ್ಲಿ ಒಂದು ಮುಕ್ಕಾಲ ಕೋಟಿಗಿಂತ ಹೆಚ್ಚಿನ ಬೀದಿ ನಾಯಿಗಳು

೨೦೧೯ ನೇ ಇಸ್ವಿಯಲ್ಲಿ ಭಾರತದಲ್ಲಿನ ೧ ಕೋಟಿ ೫೩ ಲಕ್ಷ ೯ ಸಾವಿರ ೩೫೫ ಬೀದಿ ನಾಯಿಗಳ ನೋಂದಣಿ ಮಾಡಲಾಗಿತ್ತು.೨೦೧೨ ನೇ ಇಸ್ವಿಯಲ್ಲಿ ಇದೆ ಸಂಖ್ಯೆ ೧ ಕೋಟಿ ೭೧ ಲಕ್ಷ ೩೮ ಸಾವಿರ ೩೪೯ ರಷ್ಟು ಇತ್ತು.

ಸಂಪಾದಕೀಯ ನಿಲುವು

ಬೀದಿ ನಾಯಿಗಳು ಕಚ್ಚಬಾರದು, ಈ ಮೊದಲೇ ಇದರ ಬಗ್ಗೆ ಕಠಿಣ ನಿರ್ಣಯ ತೆಗೆದುಕೊಳ್ಳುವ ಸಮಯ ಈಗ ಬಂದಿದೆ ಎಂದು ಜನರಿಗೆ ಅನಿಸುತ್ತದೆ !