ಭಯೋತ್ಪಾದಕರ ಅಂತ್ಯಯಾತ್ರೆಯಲ್ಲಿ ಸಹಭಾಗಿ ಆಗುವುದು ರಾಷ್ಟ್ರ ವಿರೋಧಿ ಅಲ್ಲ! – ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯ

  • ಸಂವಿಧಾನದಲ್ಲಿ ಕಲಂ ೨೧ ರಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಬಗೆಗಿನ ಸಂದರ್ಭದ ಉಲ್ಲೇಖ!
  • ಕಾಶ್ಮೀರದ ಕಪೋಲ ಕಲ್ಪಿತ ಸ್ವಾತಂತ್ರ್ಯಕ್ಕಾಗಿ ಪ್ರಚೋದನಕಾರಿ ಭಾಷಣ ನೀಡಿದ ಇಮಾಮನಿಗೆ ಜಾಮೀನು !

(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ)

ಶ್ರೀನಗರ – ಜಿಹಾದಿ ಭಯೋತ್ಪಾದಕರ ಅಂತ್ಯಯಾತ್ರೆಯಲ್ಲಿ ಸಹಭಾಗಿಯಾಗುವುದನ್ನು ರಾಷ್ಟ್ರ ವಿರೋಧಿ ಕೃತ್ಯವೆನ್ನಲು ಸಾಧ್ಯವಿಲ್ಲ. ಸಂವಿಧಾನದ ೨೧ ನೇ ಕಲಂನ ಅಂತರ್ಗತ ಹೀಗೆ ಮಾಡುವುದು ವೈಯಕ್ತಿಕ ಸ್ವಾತಂತ್ರ್ಯದ ಅಂತರ್ಗತ ಬರುತ್ತದೆ. ಆದ್ದರಿಂದ ಹೀಗೆ ಮಾಡುವುದರಿಂದ ಯಾರನ್ನು ತಡೆಯಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಕ್ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆ ನಡೆಸುವಾಗ ಈ ರೀತಿ ನಿರ್ಣಯ ನೀಡಿದೆ.

೧. ನ್ಯಾಯಮೂರ್ತಿ ಅಲಿ ಮಹಮ್ಮದ್ ಮಾಗ್ರೆ ಮತ್ತು ಎಮ್ ಡಿ ಅಕ್ರಮ್ ಚೌಧರಿ ಇವರ ಖಂಡ ಪೀಠದಿಂದ ಈ ಪ್ರಕರಣದ ವಿಚಾರಣೆ ನಡೆಸುವಾಗ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎಂದು ಹೇಳಲಾಗಿದೆ.
೨. ಯಾವಾಗ ಯಾವುದಾದರೊಬ್ಬ ವ್ಯಕ್ತಿಯ ವಿರುದ್ಧ ಅಪರಾಧಿ ಪ್ರಕರಣ ನಡೆಯುತ್ತಿದ್ದರೆ ಅಥವಾ ಅವನನ್ನು ತಪ್ಪಿತಸ್ಥನೆಂದು ಕಾರಾಗೃಹದ ಶಿಕ್ಷೆ ವಿಧಿಸಿದ್ದಲ್ಲಿ ಆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದು ಎಂದು ನ್ಯಾಯಾಲಯವು ಈ ಪ್ರಕರಣದಲ್ಲಿ ಹೇಳಿದೆ.
೩. ೨೦೨೧ ನೇ ಇಸ್ವಿಯಲ್ಲಿ ಹಿಜಬುಲ್ ಮುಜಾಹಿದ್ದಿನ್ ಈ ಭಯೋತ್ಪಾದಕ ಸಂಘಟನೆಯ ಒಬ್ಬ ಜಿಹಾದಿಯು ಭಾರತೀಯ ಸೈನ್ಯದ ಚಕಮಕಿಯಲ್ಲಿ ಸಾವನ್ನಪ್ಪಿದ್ದನು. ಆ ಸಮಯದಲ್ಲಿ ಅವನ ಅಂತ್ಯ ಯಾತ್ರೆಯಲ್ಲಿ ಸಹಭಾಗಿ ಆಗಿರುವ ಇಮಾಮ್ ಮತ್ತು ಸ್ಥಳೀಯರ ವಿರುದ್ಧ ಯುಎಪಿಎ ಎಂದರೆ ಅನಧಿಕೃತ ಕೃತ್ಯ ಪ್ರತಿಬಂಧಕ ಕಾನೂನಿನ ಅಂತರ್ಗತ ಕ್ರಮ ಕೈಗೊಂಡು ಬಂಧಿಸಲಾಗಿತ್ತು.
೪. ಭಯೋತ್ಪಾದಕನ ದಫನ ವಿಧಿಯ ಸಮಯದಲ್ಲಿ ಜಾವಿದ್ ಅಹಮದ್ ಶಾಹ ಈ ಇಮಾಮನು ನಮಾಜ ಅನ್ನು ಆಯೋಜಿಸಿದ್ದನು. ಅದರ ನಂತರ ಅವನು ಸ್ಥಳೀಯ ಮುಸಲ್ಮಾನರ ಭಾವನೆಗಳನ್ನು ಪ್ರಚೋದಿಸುತ್ತಾ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಸಂಘರ್ಷ ನಡೆಸುವಂತೆ ಕರೆ ನೀಡಿದ್ದನು.

ಸಂಪಾದಕೀಯ ನಿಲುವು

ಭಯೋತ್ಪಾದಕರನ್ನು ವೈಭವಿಕರಿಸುವುದ ಯಾವತ್ತಿಗೂ ಸ್ವೀಕಾರಾರ್ಹವಲ್ಲ, ಹೀಗಿರುವಾಗ ಈ ಮೂಲಕ ಜಿಹಾದಿ ಭಯೋತ್ಪಾದನೆ ಮತ್ತು ಅದನ್ನು ಸಮರ್ಥಿಸುವವರಿಗೆ ಒಂದು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿದೆಯೇ ? ಇದನ್ನು ಪರಿಶೀಲಿಸುವುದು ಅವಶ್ಯಕವಾಗಿದೆ. ಇದರ ಜೊತೆಗೆ ರಾಷ್ಟ್ರದ್ರೋಹದ ವ್ಯಾಖ್ಯೆಯನ್ನು ಸ್ಪಷ್ಟಪಡಿಸಿ ಅದು ಸರ್ವಸಾಮಾನ್ಯ ನಾಗರಿಕರಿಗೆ ತಿಳಿಯುವುದಕ್ಕಾಗಿ ನ್ಯಾಯಾಂಗ ವ್ಯವಸ್ಥೆಯು ಪ್ರಯತ್ನಿಸಬೇಕು ಎಂಬ ಅಪೇಕ್ಷೆಯಿದೆ.