ವಾರಣಾಸಿಯಲ್ಲಿನ ಸುರಕ್ಷತೆಯಲ್ಲಿ ಹೆಚ್ಚಿನ ಹೆಚ್ಚಳ
ವಾರಣಾಸಿ (ಉತ್ತರಪ್ರದೇಶ)– ಇಲ್ಲಿಯ ಜ್ಞಾನವಾಪಿಯ ಬಗ್ಗೆ ಜಿಲ್ಲಾ ನ್ಯಾಯಾಲಯವು ಇಂದು, ಸಪ್ಟೆಂಬರ್ ೧೨ ರಂದು ತೀರ್ಪು ನೀಡಲಿದೆ. ಈ ಸಂದರ್ಭದಲ್ಲಿ ವಾರಣಾಸಿ ನಗರದಲ್ಲಿ ಪೊಲೀಸರಿಂದ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ವಾರಣಾಸಿ ನಗರದಲ್ಲಿ ಕಲಂ ೧೪೪ (ಜನಸಂದಣಿ ನಿಷೇಧ) ಜಾರಿ ಮಾಡಲಾಗಿದೆ. ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ಪಥ ಸಂಚಲನ ಮತ್ತು ಗಸ್ತು ನಡೆಸಲಾಗಿದೆ. ಉಪಹಾರ ಗೃಹಗಳು, ಧರ್ಮ ಶಾಲೆಗಳು, ವಿಶ್ರಾಂತಿಗೃಹಗಳು ಇವುಗಳನ್ನು ಪರಿಶೀಲಿಸಲಾಗುತ್ತಿದ್ದು ಅವುಗಳ ಮೇಲೆ ಗಮನ ಇರಿಸಲಾಗಿದೆ.
ज्ञानवापी श्रृंगार गौरी मामले में 12 सितंबर को आएगा कोर्ट का फैसला#BreakingNews https://t.co/5Zv1ukXrHb pic.twitter.com/zhTXz7d0TM
— TV9 Bharatvarsh (@TV9Bharatvarsh) September 10, 2022
ಯಾವ್ಯಾವ ಅಂಶಗಳ ಬಗ್ಗೆ ತೀರ್ಪು ಇರಲಿದೆ ?
ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಕೃಷ್ಣ ವಿಶ್ವೇಶ ಇವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಅದರ ನಂತರ ಅವರು ಇದರ ಬಗ್ಗೆ ತೀರ್ಪು ಸೆಪ್ಟೆಂಬರ್ ೧೨ ವರೆಗೆ ಕಾಯ್ದಿರಿಸಿದ್ದಾರೆ. ಜ್ಞಾನವಾಪಿ ಮತ್ತು ಇಲ್ಲಿಯ ಶೃಂಗಾರ ಗೌರಿಯ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ನೀಡಬೇಕು, ಎಂಬುದರ ಬಗ್ಗೆ ತೀರ್ಪು ನೀಡಲಾಗುವುದು, ಹಿಂದೂಗಳ ಪರವಾಗೊ ೪ ಮಹಿಳೆಯರು ದಿವಾಣಿ ನ್ಯಾಯಾಲಯದಲ್ಲಿ ಈ ಬೇಡಿಕೆಯನ್ನು ಸಲ್ಲಿಸಿದ್ದರು. ಇದರ ಬಗ್ಗೆ ನ್ಯಾಯಾಲಯವು ಜ್ಞಾನವಾಪಿಯ ಸಮೀಕ್ಷೆ ನಡೆಸಲು ಆದೇಶ ನೀಡಿದ ನಂತರ ಇದನ್ನು ಮಾಡಲಾಗಿತ್ತು. ಅದಕ್ಕೆ ಮುಸಲ್ಮಾನ ಪಕ್ಷದಿಂದ ಆಕ್ಷೇಪ ವ್ಯಕ್ತವಾದಾಗ ಅದನ್ನು ತಿರಸ್ಕರಿಸಲಾಗಿತ್ತು. ಅದರ ನಂತರ ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಆದ ನಂತರ ನ್ಯಾಯಾಲಯವು ಈ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಆದೇಶಿಸಿತ್ತು.