ಕೊಲಕಾತಾದಿಂದ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ವಶ !

ಗುಜರಾತ್ ಉಗ್ರ ನಿಗ್ರಹ ದಳಕ್ಕೆ ಮೊದಲೇ ಮಾಹಿತಿ ಸಿಕ್ಕಿತ್ತು !

ಕೋಲಕಾತಾ – ಗುಜರಾತ ಉಗ್ರ ನಿಗ್ರಹ ದಳವು ಕೊಲಕಾತಾದಲ್ಲಿ ಅಮಲು ವಸ್ತುಗಳ ವಿರುದ್ಧದ ನಡೆಸಿದ ದೊಡ್ಡ ಕಾರ್ಯಾಚರಣೆಯಲ್ಲಿ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥವನ್ನು ವಶಪಡಿಸಿಕೊಂಡಿದೆ. ದುಬೈಯಿಂದ ‘ಗೇರ್ ಬಾಕ್ಸ್’ನಲ್ಲಿ ಬಚ್ಚಿಟ್ಟು ೪೦ ಕೆಜಿ ಅಮಲು ಪದಾರ್ಥವನ್ನು ಭಾರತಕ್ಕೆ ತರಲಾಗುತ್ತಿದೆ ಎಂಬ ಮಾಹಿತಿಯು ಗುಜರಾತನ ಉಗ್ರ ನಿಗ್ರಹ ದಳಕ್ಕೆ ಲಭಿಸಿತ್ತು. ಈ ಮಾಹಿತಿಯ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿದೆ.


ಕಳೆದ ಕೆಲವು ತಿಂಗಳುಗಳಿಂದ ಗುಜರಾತ ಉಗ್ರ ನಿಗ್ರಹ ದಳವು ಅಮಲು ಪದಾರ್ಥಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈ ವೇಳೆ ೩೬ ಗೇರ್ ಬಾಕ್ಸ್ ಗಳ ಪೈಕಿ ೧೨ ಗೇರ್ ಬಾಕ್ಸ್ ಗಳನ್ನು ಅಮಲು ಪದಾರ್ಥ ಎಂದು ಗುರುತಿಸಲು ಬಿಳಿ ಬಣ್ಣ ಹಚ್ಚಲಾಗಿತ್ತು. ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಇತರ ಗೇರ್ ಬಾಕ್ಸ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೋಲಕಾತಾ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಭಾಟಿಯಾ ತಿಳಿಸಿದ್ದಾರೆ.