ನೂಂಹ (ಹರ್ಯಾಣ)ದಲ್ಲಿ ಗಣಿ ಮಾಫಿಯಾಗಳಿಂದ ಪೊಲೀಸರ ಮೇಲೆ ಹಲ್ಲೆ : ಓರ್ವ ಪೊಲೀಸ್‌ಗೆ ಗಾಯ

ನೂಂಹ (ಹರ್ಯಾಣ) – ಗಣಿ ಮಾಫಿಯಾಗಳು ಪೊಲೀಸರ ಮೇಲೆ ಹಲ್ಲೆ ಮಾಡಿದರು, ಇದರಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದಾನೆ. ಕೆಲವು ವಾರಗಳ ಹಿಂದೆ ಇಲ್ಲಿ ಗಣಿ ಮಾಫಿಯಾಗಳು ಪೊಲೀಸ್ ಉಪಧೀಕ್ಷಕರ ಮೇಲೆ ಟ್ರಕ್ ಹತ್ತಿಸಿ ಅವರ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ೫ ಪರಿಚಯದ ಹಾಗೂ ಇತರ ೪೫ ಅಪರಿಚಿತರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ.


ಪೊಲೀಸರಿಗೆ, ರಾಜಸ್ಥಾನ ಮತ್ತು ಹರ್ಯಾಣದ ಗಡಿಯಲ್ಲಿನ ಬಡೇರ ಎಂಬಲ್ಲಿ ಗುಡ್ಡದ ಮೇಲೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿತ್ತು. ಇಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನು ತರಲಾಗಿದೆ. ಪೊಲೀಸರು ಅಲ್ಲಿಗೆ ತಲಪಿದಾಗ ಅವರ ಮೇಲೆ ಹಲ್ಲೆ ಮಾಡಲಾಯಿತು. ಪೊಲೀಸರು ಈಗ ಇಲ್ಲಿರುವ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಅದೇ ರೀತಿ ಆರೋಪಿಗಳ ಬಂದನಕ್ಕಾಗಿ ತಂಡವನ್ನು ಸ್ಥಾಪನೆ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಇಲ್ಲಿ ಈ ಹಿಂದೆಯೂ ಗಣಿ ಮಾಫಿಯಾಗಳಿಂದ ಓರ್ವ ಪೊಲೀಸ್ ಉಪಅಧೀಕ್ಷಕರನ್ನು ಕೊಲೆ ಮಾಡಿದನಂತರವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಪುನಃ ಅಂತಹ ಘಟನೆ ಸಂಭವಿಸಿದೆ, ಎಂಬುದು ಅರಿವಾಗುತ್ತದೆ ! ರಾಜ್ಯದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಸ್ಥಿತಿ ಬರಬಾರದು, ಎಂದು ಭಾರತೀಯರಿಗೆ ಅನಿಸುತ್ತದೆ !