ಉಪವಾಸ ಮತ್ತು ದಾಂಡಿ ಯಾತ್ರೆ ಮೂಲಕ ಅಲ್ಲ ಬದಲಾಗಿ ನೇತಾಜಿ ಮತ್ತು ಸಾವರ್ಕರನಂತಹ ಕ್ರಾಂತಿಕಾರಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ! – ನಟಿ ಕಂಗನಾ ರಾಯಣಾವತ

ನಟಿ ಕಂಗನಾ ರಾಣಾವತ್

ಮುಂಬಯಿ – ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ ಸಾವರ್ಕರ್ ಇವರಂತಹ ಅನೇಕ ಕ್ರಾಂತಿಕಾರಿಗಳಿಂದ ದೊರೆತಿದೆ. ಈ ಸ್ವಾತಂತ್ರ್ಯ ಕೇಳಿ ಪಡೆಯಲಿಲ್ಲ ಬದಲಾಗಿ ಅದಕ್ಕಾಗಿ ಸಂಘರ್ಷ ಮಾಡಬೇಕಾಗಿತ್ತು ಎಂದು ನಾನು ಯಾವಾಗಲೂ ಹಾಗೂ ಇಂದಿಗೂ ಹೇಳುತ್ತೇನೆ. ಪ್ರತಿಯೊಬ್ಬರೂ ತಮ್ಮದೇ ಯೋಚನೆ ಮಾಡುವ ಪದ್ಧತಿ ಇದೆ ಮತ್ತು ನನಗೆ ಅನಿಸುತ್ತದೆ ನೇತಾಜಿ ಮತ್ತು ಸಾವರ್ಕರ್ ಇವರಂತಹ ಅನೇಕ ಕ್ರಾಂತಿಕಾರಿಗಳು ಸಂಘರ್ಷ ಸಂಪೂರ್ಣವಾಗಿ ನಿರಾಕರಿಸಲಾಗಿದೆ. ‘ಕೇವಲ ಉಪವಾಸ ಮತ್ತು ದಂಡಿಯಾತ್ರೆಯಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಬಿಂಬಿಸಲಾಗಿದೆ; ಪ್ರತ್ಯಕ್ಷದಲ್ಲಿ ಹಾಗೆ ನಡೆದಿಲ್ಲ, ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ ಇವರು ಸಪ್ಟೆಂಬರ್ ೮ ರಂದು ‘ಎ.ಎನ್.ಐ. ಜೊತೆ ಮಾತನಾಡುವಾಗ ಅಭಿಪ್ರಾಯ ವ್ಯಕ್ತಪಡಿಸಿದರು.

೧. ಪ್ರಧಾನಿ ನರೇಂದ್ರ ಮೋದಿ ಇವರು ದೇಶದ ರಾಜಧಾನಿ ದೆಹಲಿಯಲ್ಲಿ ‘ಕರ್ತವ್ಯ ಪಥ’ದ ಉದ್ಘಾಟನೆ ಮಾಡಿದರು. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ಪುತ್ತಳಿ ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ನಟಿ ಕಂಗನಾ ರಾಣಾವತ್ ಇವರು ಸಹಭಾಗಿಯಾಗಿದ್ದರು. ಅದರ ಮೊದಲು ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

೨. ಅವರು, “ನಾನು ನೇತಾಜಿ ವಿಷಯವಾಗಿ ಯಾವಾಗಲೂ ಸ್ಪಷ್ಟವಾಗಿಯೇ ಮಾತನಾಡುತ್ತೇನೆ. ನಾನು ಯಾವಾಗಲೂ ಹೇಳುತ್ತಾ ಬಂದಿದ್ದೇನೆ ನಾನು ‘ಗಾಂಧೀವಾದಿ’ಯಲ್ಲ, ‘ನಾನು ನೇತಾಜಿ ಸುಭಾಷ ಚಂದ್ರವಾದಿ’ ಆಗಿರುವೆ. ನಾನು ಆ ಜನರ ಪೈಕಿ ಒಬ್ಬಳಾಗಿದ್ದೇನೆ, ‘ತುಂ ಮುಝೆ ಖೂನ ದೋ, ಮೈ ತುಮ್ಹೇ ಆಝಾದಿ ದುಂಗಾ, ಇದರ ಬಗ್ಗೆ ವಿಶ್ವಾಸವಿದೆ. ಇಂದಿನ ಈ ಐತಿಹಾಸಿಕ ದಿನ ಮತ್ತು ಈ ದಿನಕ್ಕಾಗಿ ನಾನು ನನ್ನನ್ನು ಭಾಗ್ಯಶಾಲಿ ಎಂದುಕೊಳ್ಳುತ್ತೇನೆ.” ಎಂದು ಹೇಳಿದರು.