ಕಾಶಿಯಲ್ಲಿನ ರಜಿಯಾ ಮಸೀದಿ ಹಿಂದೆ ಕಾಶೀವಿಶ್ವನಾಥ ಮಂದಿರ ಆಗಿದ್ದರಿಂದ ಅಲ್ಲಿ ಪುನಃ ಮಂದಿರವನ್ನು ನಿರ್ಮಿಸಿರಿ !

ಕಾಶೀ ರಾಜಮನೆತನದ ಹುಡುಗಿಯಿಂದ ಮನವಿ !

ವಾರಣಾಸಿ (ಉತ್ತರಪ್ರದೇಶ) – ಕಾಶೀ ರಾಜಮನೆತನದ ಓರ್ವ ಹುಡುಗಿ ‘ಧಾರ್ಮಿಕ ಸ್ಥಳ ಕಾನೂನು ೧೯೯೧’(ಪ್ಲೆಸಸ್ ಆಫ್ ವರ್ಶಿಪ್) ಈ ಕಾನೂನಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಹಸ್ತಕ್ಷೇಪ ಮಾಡುವಂತೆ ಅರ್ಜಿಯನ್ನು ದಾಖಲಿಸಿದ್ದಾಳೆ.

ಇದರ ಅಡಿಯಲ್ಲಿ ಅವಳು ಕಾಶಿಯಲ್ಲಿನ ರಜಿಯಾ ಮಸೀದಿ ಹಿಂದೆ ಕಾಶೀ ವಿಶ್ವನಾಥ ಮಂದಿರ ಆಗಿತ್ತು ಎಂದು ಹೇಳುತ್ತಾ ಈಗ ಮಸೀದಿಯಲ್ಲಿ ಬದಲಾವಣೆ ಮಾಡಿ ಅಲ್ಲಿ ಪುನಃ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ವಿನಂತಿಸಿದ್ದಾಳೆ. ಈ ಮನವಿಯಲ್ಲಿ, ೧೧೯೪ ರಲ್ಲಿ ಕುತುಬ-ಉದ್-ದ್ದೀನ-ಐಬಕನು ಮೂಲ ಕಾಶೀ ವಿಶ್ವನಾಥ ಮಂದಿರವನ್ನು ಕೆಡಹಿ ಅಲ್ಲಿ ರಜಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದನು. ಇಂದು ಕೂಡ ಅದು ಇಂದಿನ ಕಾಶೀ ವಿಶ್ವನಾಥ ಮಂದಿರದ ಎದುರಿಗೆ ಇದೆ. ಇದಲ್ಲದೆ ಔರಂಗಜೇಬನು ಪಂಚಗಂಗಾ ದಡದ ಮೇಲಿನ ಬಿಂದೂ ಮಾಧವ ಮಂದಿರವನ್ನು ಕೆಡಹಿ ಅಲ್ಲಿ ಧರಹರಾ ಮಸೀದಿಯನ್ನು ನಿರ್ಮಾಣ ಮಾಡಲಾಯಿತು. ಅಲ್ಲಿಯೂ ಪುನಃ ಮಂದಿರವನ್ನು ನಿರ್ಮಾಣ ಮಾಡಬೇಕು. ಎಂದು ಈ ಅರ್ಜಿಯ ಮೂಲಕ ಆಗ್ರಹಿಸಿದ್ದಾಳೆ.