ತೌಫಿಕ್‌ನಿಂದ ಲಕ್ಷ್ಮಣಪುರಿ (ಉತ್ತರಪ್ರದೇಶ) ನಲ್ಲಿರುವ ‘ಲೆಟೆ ಹೂಯೆ ಹನುಮಾನ್(ನಿದ್ರಿಸುತ್ತಿರುವ ಹನುಮಂತ) ದೇವಾಲಯ’ದ ವಿಗ್ರಹಗಳ ಧ್ವಂಸ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಟಿಲೆ ವಾಲಿ ಮಸೀದಿಯ ಬಳಿಯಿರುವ ‘ಲೇಟೆ ಹೂಯೆ ಹನುಮಾನ್ ಮಂದಿರ’ದಲ್ಲಿ ೨ ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೌಫೀಕ್‌ನನ್ನು ಬಂಧಿಸಿದ್ದಾರೆ. ಸದ್ಯ ಇಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಸ್ಥಳೀಯ ಶಾಸಕ ನೀರಜ ಬೋರಾ ಇವರು, ಇದರ ಹಿಂದೆ ಗಲಭೆ ಸೃಷ್ಟಿಸುವ ಉದ್ದೇಶ ಇರಬಹುದು ಎಂದು ಹೇಳಿದ್ದಾರೆ.
ದೇವಾಲಯದ ಅರ್ಚಕರ ಪ್ರಕಾರ, ಶನಿದೇವ ಮತ್ತು ಶ್ರೀ ಹನುಮಂತನ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಇಲ್ಲಿ ಮಂಗಲ ಮಹೋತ್ಸವ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ಬಂದು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಈ ವೇಳೆ ದೇವಸ್ಥಾನದಲ್ಲಿದ್ದ ಭಕ್ತರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ತೌಫಿಕ್ ಎಂದು ಹೇಳಿದ್ದಾನೆ. (ವಿಗ್ರಹ ಒಡೆಯುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ‘ವಿಗ್ರಹವನ್ನು ಧ್ವಂಸ ಮಾಡುವವ ಹಿಂದೂವೇ ಆಗಿದ್ದಾರೆ’, ಎಂದು ಬಿಂಬಿಸಲು ತೌಫಿಕ್‌ನು ಪ್ರಯತ್ನಿಸಿದ್ದಾನೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂಗಳ ದೇವಾಲಯಗಳ ಮೇಲೆ ದಾಳಿ ಮಾಡುವವರು ಯಾರು ಎಂದು ಜಗಜ್ಜಾಹೀರಾಗಿರುವಾಗ, ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋ)ಪರರು ಒಬ್ಬರೂ ಕೂಡ ಬಾಯಿ ತೆರೆಯುವುದಿಲ್ಲ!
  • ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವವರಿಗೆ ಈಗ ಗಲ್ಲು ಶಿಕ್ಷೆ ವಿಧಿಸುವ ಕಾನೂನುಗಳನ್ನು ಮಾಡುವ ಅವಶ್ಯಕತೆಯಿದೆ. ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಇದಕ್ಕಾಗಿ ಪ್ರಯತ್ನಿಸಬೇಕು!