ಗಡಿಭದ್ರತಾ ದಳದ ಸೈನಿಕರು ಹೆರಾಯಿನ್ ಮತ್ತು ಅಫೂವಿನ ಸಂಗ್ರಹ ಜಪ್ತಿ ಮಾಡಿದರು

ಚಂಡಿಗಢ – ಪಾಕಿಸ್ತಾನವು ಭಾರತದ ವಿರುದ್ಧ ಚಟುವಟಿಕೆಯನ್ನು ಮುಂದುವರಿಸಿದೆ. ಪಂಜಾಬನಲ್ಲಿ ನಿರಂತರವಾಗಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಗಡಿ ಭದ್ರತಾ ದಳದ ಸೈನಿಕರು ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರ ಸಂಚನ್ನು ವಿಫಲಗೊಳಿಸಿದೆ. ಸೈನಿಕರು ಮುಹರ ಜೆಮಶೇರ ಗ್ರಾಮದಲ್ಲಿ ೬.೩೭೦ ಕಿ.ಗ್ರಾಂ. ಹೆರಾಯಿನ್, ೧೯೦ ಗ್ರಾಮ ಅಫೂ ಮತ್ತು ೩೮ ಕೋಟಿ ರೂಪಾಯಿಯ ಕಾಟ್ರಿಜ್‌ಗಳನ್ನು ಜಪ್ತಿ ಮಾಡಿದ್ದಾರೆ.

ಗಡಿ ಭದ್ರತಾ ದಳದ ಸೈನಿಕರು ಕಳ್ಳ ಸಾಗಾಣಿಕೆದಾರರ ಮೇಲೆ ಗುಂಡು ಹಾರಿಸಿದರು. ಆದರೆ ಕತ್ತಲೆಯ ದುರುಪಯೋಗ ಪಡೆದು ಅವರು ಓಡಿ ಹೋದರು. ‘ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರು ಭಾರತದ ಹೊಲದಲ್ಲಿ ಹೆರಾಯಿನ ಸಂಗ್ರಹವನ್ನು ಮುಚ್ಚಿಟ್ಟಿರುವ ಗುಪ್ತ ಮಾಹಿತಿ ಸೈನಿಕರಿಗೆ ಸಿಕ್ಕಿತ್ತು. ಈ ಮಾಹಿತಿಯ ಆಧಾರದಲ್ಲಿ ಭಾರತೀಯ ಸೈನಿಕರು ಗಡಿಗೆ ಹೊಂದಿಕೊಂಡಿರುವ ಝಾಂಗಡ ಭೈನಿ ಮತ್ತು ರಾಮಸಿಂಗ ವಾಲಿ ಗ್ರಾಮದಲ್ಲಿ ಶೋಧಕಾರ್ಯ ಪ್ರಾರಂಭಿಸಿತ್ತು’, ಎಂದು ಗಡಿ ಭದ್ರತಾ ದಳದ ಅಧಿಕಾರಿಗಳು ಹೇಳಿದ್ದಾರೆ.