ಭಾರತೀಯ ಸಂಜಾತೆ ಸುಯೆಲಾ ಬ್ರೆವರ್ಮನ್ ಬ್ರಿಟನ್‌ನ ಗೃಹ ಸಚಿವ ಎಂದು ನೇಮಕ

ಲಂಡನ (ಬ್ರಿಟನ) – ಬ್ರಿಟನ್‌ನ ಪ್ರಧಾನಿ ಹುದ್ದೆಯ ಚುನಾವಣೆಯಲ್ಲಿ ಭಾರತೀಯ ಸಂಜಾತೆ ಋಷಿ ಸುನಕ ಇವರು ಪರಾಗವಗೊಂಡುರು ಮತ್ತು ಲಿಝ ಟ್ರಸ್ ಜಯಗಳಿಸಿದರು. ಈಗ ಟ್ರಸ್ ಇವರು ಬ್ರಿಟನ್‌ನ ಗೃಹ ಸಚಿವ ಎಂದು ಒಬ್ಬ ಭಾರತೀಯ ಸಂಜಾತೆ ಮಹಿಳೆಯನ್ನು ನೇಮಕ ಮಾಡಿದ್ದಾರೆ. ೪೨ ವರ್ಷದ ವಯಸ್ಸಿನ ಸುಯೆಲಾ ಇವರು ಈ ಮೊದಲು ಬ್ರಿಟನ್ ಸರಕಾರದಲ್ಲಿ ಅನೇಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಮೊದಲು ಅವರು ಬೋರಿಸ್ ಜಾನ್ಸನ್ ಇವರ ನೇತೃತ್ವದ ಸರಕಾರದಲ್ಲಿ ಆಟಾರ್ನಿ ಜನರಲ್ ಎಂದು ಸೇವೆ ಸಲ್ಲಿಸಿದ್ದಾರೆ.

ಬ್ರೆವರ್ಮನ್ ಇವರಿಗೆ ಎರಡು ಮಕ್ಕಳಿದ್ದಾರೆ. ಅವರ ತಾಯಿ ತಮಿಳ ಹಿಂದೂ ಆಗಿದ್ದು ಅವರು ಮೂಲತಃ ಗೋವಾದವರಾಗಿದ್ದಾರೆ. ಅವರ ತಾಯಿ ಮಾರಿಷಸ್ ನಿಂದ ಬ್ರಿಟಸ್‌ಗೆ ಬಂದಿದ್ದರು. ಹಾಗೂ ಅವರ ತಂದೆ ೧೯೬೦ ರಲ್ಲಿ ಕೇನಿಯಾದಿಂದ ಸ್ಥಳಾಂತರಗೊಂಡಿದ್ದರು. ಸುಯೆಲಾ ಬ್ರೆವರ್ಮನ್ ಇವರು ಕೇಂಬ್ರಿಜ್ ವಿದ್ಯಾಪೀಠದಿಂದ ಕಾನೂನಿನ ಪದವಿ ಪಡೆದಿದ್ದಾರೆ. ೨೦೧೮ ರಲ್ಲಿ ಅವರು ರಾಯಲ್ ಬ್ರೆವರ್ಮನ್ ಇವರ ಜೊತೆಗೆ ವಿವಾಹವಾದರೂ. ಅವರು ಬೌದ್ಧ ಧರ್ಮೀಯರಾಗಿದ್ದಾರೆ.