ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಮಶಾನಭೂಮಿಯ ಗೋಡೆಯನ್ನು ಮುಸಲ್ಮಾನರು ಬೀಳಿಸಿದರು !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಭಾರತದ ಪ್ರವಾಸದಲ್ಲಿದ್ದಾರೆ. ಅವರು ಭಾರತದ ಜೊತೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಒಪ್ಪಂದಗಳನ್ನು ಮಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಆಕ್ರಮಣ ಮುಂದುವರಿಯುತ್ತಲೇ ಇದೆ.

ಈಗ ಬಾಂಗ್ಲಾದೇಶದ ಮುಶೀಗಂಜದಲ್ಲಿ ಹಿಂದೂಗಳ ಸ್ಮಶಾನಭೂಮಿಯ ಮೇಲೆ ಸ್ಥಳೀಯ ಮುಸಲ್ಮಾನರು ಆಕ್ರಮಣ ಮಾಡಿ ಅದರ ಗೋಡೆಯನ್ನು ಬೀಳಿಸಿದರು. ಈ ಸ್ಮಶಾನಭೂಮಿಯ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕೇಂದು ಮುಸಲ್ಮಾನರು ಪ್ರತಿಭಟನೆಯನ್ನೂ ಮಾಡಿದರು, ಎಂದು ‘ವ್ಹೈಸ್ ಆಫ್ ಬಾಂಗ್ಲಾದೇಶೀ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಟ್ವಿಟ ಮೂಲಕ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಆಕ್ರಮಣಗಳಾಗುತ್ತಿರುವಾಗ ಭಾರತ ಈ ವಿಷಯದಲ್ಲಿ ಬಾಂಗ್ಲಾದೇಶಕ್ಕೆ ಸ್ಪಷ್ಟೀಕರಣ ಕೇಳುವುದು ಕಾಣಿಸುವುದಿಲ್ಲ. ‘ಬಾಂಗ್ಲಾದೇಶದ ಪ್ರಧಾನಮಂತ್ರಿ ಭಾರತದ ಪ್ರವಾಸದಲ್ಲಿದ್ದು ಅವರಿಗೆ ಈ ವಿಷಯದಲ್ಲಿ ಸ್ಪಷ್ಟಿಕರಣ ಕೇಳುವ ಧೈರ್ಯ ಭಾರತ ತೋರಿಸಬಹುದೇ ?’, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗುತ್ತಿದೆ !