ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಓಣಮ್ ಆಚರಿಸುತ್ತಿರುವುದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ !

ಮಲ್ಲಪ್ಪುರಮ್ (ಕೇರಳ) – ಮಲ್ಲಪ್ಪುರಮ್‌ನ ವಂದೂರ ಗವರ್ನ್ಮೆಂಟ್ ಗರ್ಲ್ಸ್ ಸೆಕೆಂಡರಿ ಸ್ಕೂಲ್‌ನಲ್ಲಿನ ಒಂದು ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ) ಧರಿಸಿದ ವಿದ್ಯಾರ್ಥಿನಿಯರು ಓಣಮ್ ಹಬ್ಬವನ್ನು ಆಚರಿಸುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋದ ಸತ್ಯ ಏನೆಂಬುದು ಮಾತ್ರ ಸ್ಪಷ್ಟವಾಗಿಲ್ಲ. ‘ಈ ವಿದ್ಯಾರ್ಥಿನಿಯರು ನಿಜವಾಗಿಯೂ ಮುಸಲ್ಮಾನರೇ ?’, ಎಂಬುದೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ಮುಸಲ್ಮಾನರು ಹಿಂದೂಗಳ ಹಬ್ಬಗಳಲ್ಲಿ ಭಾಗವಹಿಸಿದಾಗ ಅಥವಾ ಹಿಂದೂಗಳು ಮುಸಲ್ಮಾನರ ಹಬ್ಬಗಳಲ್ಲಿ ಭಾಗವಹಿಸಿದಾಗ ಅದರ ವಾರ್ತೆಯನ್ನು ಪ್ರಸಾರ ಮಾಡಲು ಮಾಧ್ಯಮಗಳು ತುಂಬಾ ಉತ್ಸಾಹದಿಂದ ಇರುತ್ತವೆ; ಆದರೆ ಯಾವಾಗ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮಸೀದಿಗಳಿಂದ ಆಕ್ರಮಣಗಳನ್ನು ಮಾಡಲಾಗುತ್ತದೆ. ಮುಸಲ್ಮಾನರಿಂದ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಸಣ್ಣಪುಟ್ಟ ಕಾರಣಕ್ಕಾಗಿ ಆಕ್ರಮಣ ಮಾಡಲಾಗುತ್ತದೆ. ಆಗ ಮಾತ್ರ ಈ ಪ್ರಸಾರಮಾಧ್ಯಮಗಳು ಈ ವಾತೆಗಳನ್ನು ನೀಡಲು ಹಿಂಜರಿಯುತ್ತವೆ ಅಥವಾ ‘ಎರಡು ಗುಂಪುಗಳಲ್ಲಿ ಹಿಂಸಾಚಾರ’ ಎಂದು ಹೇಳಿ ಸತ್ಯವನ್ನು ಅಡಗಿಸಲು ಪ್ರಯತ್ನಿಸುತ್ತವೆ !