ಟಿ. ರಾಜಾ ಸಿಂಹ ಇವರಿಗೆ ನ್ಯಾಯ ದೊರಕಿಸಿ ಕೊಡಲು ತೇಲಂಗಾಣದ ಹಿಂದುತ್ವನಿಷ್ಠ ಸಂಘಟನೆಗಳ ಪ್ರಯತ್ನ!

ಟಿ.ರಾಜಾ ಸಿಂಹ

ಸಿಕಂದರಾಬಾದ (ತೇಲಂಗಾಣಾ) – ಟಿ.ರಾಜಾ ಸಿಂಹರನ್ನು ಬಂಧಿಸಿರುವ ಪ್ರಕರಣದಲ್ಲಿ ಸಪ್ಟೆಂಬರ ೪ ರಂದು ಹಿಂದೂ ಜನಜಾಗೃತಿ ಸಮಿತಿಯು ಜಲಾರಾಮ ಬಾಪ್ಪಾ ಮಂದಿರದ ಆವರಣದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ೧೮ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ತೇಲಂಗಾಣಾ ಮತ್ತು ಆಂಧ್ರಪ್ರದೇಶದ ಪ್ರತಿಯೊಂದು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಧರಣಿ ಆಯೋಜಿಸುವುದು, ಗಣೇಶೋತ್ಸವ ಮಂಟಪದಲ್ಲಿ ಟಿ. ರಾಜಾ ಸಿಂಹರನ್ನು ಬೆಂಬಲಿಸಿ ಫಲಕ ಹಚ್ಚುವುದು, ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟುವುದು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಮೇಲೆ ನಿಷೇಧವನ್ನು ವ್ಯಕ್ತಪಡಿಸಿ ಫಲಕ ಹಚ್ಚುವುದು, ‘ನಾನು ರಾಜಾ ಸಿಂಹರನ್ನು ಬೆಂಬಲಿಸುತ್ತೇನೆ ಮತ್ತು ನ್ಯಾಯ ಬೇಕು’, ಎನ್ನುವ ಸ್ಟಿಕ್ಕರ್ಸ ಹಚ್ಚಲು ನಿರ್ಧರಿಸಲಾಯಿತು. ಹಾಗೆಯೇ ಈ ಸಮಯದಲ್ಲಿ ರಾಜಾ ಸಿಂಹ ಇವರನ್ನು ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಶಿದ ಖಾನ, ಫಿರೋಜ ಖಾನ, ಆಯೇಶಾ ಫರಹೀನ ಮತ್ತು ಶಿರಚ್ಛೇದಿಸುವ ಘೋಷಣೆ ಮಾಡಿದ್ದ ಕಲೀಮುದ್ದೀನ ಮತ್ತು ಇತರೆ ಮತಾಂಧ ಮುಸಲ್ಮಾನರ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಲು ನಿರ್ಧರಿಸಲಾಯಿತು.


ರಾಜಾ ಸಿಂಹರಿಗೆ ತೇಲಂಗಾಣಾ ಸರಕಾರದಿಂದ ನ್ಯಾಯ ದೊರಕುವ ಸಾಧ್ಯತೆಯಿಲ್ಲ ಮತ್ತು ಆದ್ದರಿಂದ ರಾಜಾ ಸಿಂಹರ ಮೇಲಿನ ಎಲ್ಲ ಪ್ರಕರಣಗಳನ್ನು ಪಕ್ಕದ ಕರ್ನಾಟಕ, ಗೋವಾ ಅಥವಾ ಮಹಾರಾಷ್ಟ್ರ ಈ ರಾಜ್ಯಗಳಿಗೆ ವರ್ಗಾಯಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.