ಭಾರತೀಯ ಕ್ರಿಕೆಟ ಆಟಗಾರರಿಗೆ ‘ಖಲಿಸ್ತಾನವಾದಿ’ ಎಂದು ಕರೆದಿರುವ ಬಗ್ಗೆ ‘ವಿಕಿಪೀಡಿಯಾ’ಕ್ಕೆ ಭಾರತ ಸರಕಾರದಿಂದ ನೊಟೀಸ್ !

ಅರ್ಶದೀಪ ಸಿಂಹ

ನವ ದೆಹಲಿ – ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು. ತದನಂತರ ಭಾರತ ಸೋತಿತು. ಈ ಘಟನೆಯ ಬಳಿಕ ಸಾಮಾಜಿಕ ಮಾಧ್ಯಮದಿಂದ ಪಾಕಿಸ್ತಾನಿ ನಾಗರಿಕರು ಅರ್ಶದೀಪನನ್ನು ‘ಖಲಿಸ್ತಾನವಾದಿ’ಯಾಗಿದ್ದಾನೆಂದು ಹೇಳುತ್ತಾ ಅಪಪ್ರಚಾರ ಪ್ರಾರಂಭಿಸಿದರು. ಹಾಗೆಯೇ ‘ವಿಕಿಪೀಡಿಯಾ’ ಈ ಸಂಕೇತಸ್ಥಳವೂ ಅವನ ವಿಷಯದಲ್ಲಿ ಇದೇ ರೀತಿಯ ಮಾಹಿತಿಯನ್ನು ಪ್ರಸಾರ ಮಾಡಿತು.

ಇದರಿಂದ ಭಾರತದ ‘ಕೇಂದ್ರಿಯ ಇಲೆಕ್ಟ್ರಾನಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ’ ಈ ಸಂದರ್ಭದಲ್ಲಿ ವಿಕಿಪೀಡಿಯಾಕ್ಕೆ ನೊಟೀಸ್ ಜಾರಿ ಮಾಡಿ ‘ನೀವು ಅರ್ಶದೀಪ ಸಿಂಹನನ್ನು ಖಲಿಸ್ತಾನ ಸಂಘಟನೆಯೊಂದಿಗೆ ಹೇಗೆ ಜೋಡಿಸಿದಿರಿ?’ ಎಂದು ಕೇಳಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಒಂದು ಉನ್ನತ ಪಟ್ಟದ ಸಮಿತಿಯಿಂದ ವಿಕಿಪೀಡಿಯಾ ಅಧಿಕಾರಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.