ಕೆನಡಾದಲ್ಲಿ ೧೩ ಕಡೆಗಳಲ್ಲಿ ಚಾಕೂವಿನಿಂದ ನಡೆಸಲಾದ ಆಕ್ರಮಣಗಳಲ್ಲಿ ೧೦ ಜನರು ಮೃತರಾದರೆ, ೧೫ ಜನರು ಗಾಯಗೊಂಡಿದ್ದಾರೆ

ಒಟಾವಾ (ಕೆನಡಾ) – ಕೆನಡಾದ ಸಸ್ಕೆಚೆವಾನ ಪ್ರಾಂತ್ಯದಲ್ಲಿ ಸುಮಾರು ೧೩ ಕಡೆಗಳಲ್ಲಿ ಚಾಕೂವನ್ನು ಬಳಸಿ ಹಲ್ಲೆ ಮಾಡಲಾಗಿದೆ, ಈ ಆಕ್ರಮಣಗಳಲ್ಲಿ ೧೦ ಜನರು ಮೃತರಾಗಿದ್ದಾರೆ ಹಾಗೂ ೧೫ ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಡೆಮಿರನ ಸ್ಯಂಡರಸನ (೩೧ ವರ್ಷ) ಹಾಗೂ ಮಾಯಿಲ್ಸ ಸ್ಯಂಡರಸನ (೩೦ ವರ್ಷ) ಎಂಬ ಇಬ್ಬರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಕೆನಡಾದ ಇತಿಹಾಸದಲ್ಲಿಯೇ ಇದು ಅತ್ಯಂತ ದೊಡ್ಡ ಆಕ್ರಮಣವಾಗಿರುವುದಾಗಿ ಹೇಳಲಾಗುತ್ತಿದೆ. ಕೆನಡಾದ ಪ್ರಧಾನಮಂತ್ರಿ ಜಸ್ಟಿನ ಟ್ರೂಡೊರವರು ಈ ಆಕ್ರಮಣಗಳ ವಿಷಯದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ‘ಈ ಆಕ್ರಮಣಗಳ ಹಿಂದಿನ ಕಾರಣವೇನು’ ಎಂಬುದರ ಮಾಹಿತಿ ಈಗಲೂ ದೊರೆತಿಲ್ಲ.