ಸೀವೂಡ್ಸನ ‘ಬೆಥೆಲ ಗಾಸ್ಪೆಲ್ ಚರ್ಚ’ನ ಪಾದ್ರಿಯು ಇನ್ನೂ ೩ ಅಪ್ರಾಪ್ತ ವಯಸ್ಸಿನ ಬಾಲಕಿಯರ ಲೈಂಗಿಕ ಶೋಷಣೆ ಮಾಡಿರುವ ದೂರು !

‘ಬೆಥೆಲ್ ಗಾಸ್ಪೆಲ್ ಚಾರಿಟೆಬಲ ಟ್ರಸ್ಟ’ನ ಚರ್ಚನಲ್ಲಿ ಅನುಮತಿಯಿಲ್ಲದೇ ಬಾಲಗೃಹ ನಡೆಸುವ ಪಾದ್ರಿ(ಪಾಸ್ಟರ) ರಾಜಕುಮಾರ ಯೇಶುದಾಸ

ನವಿ ಮುಂಬಯಿ – ಸೀವೂಡ್ಸನ ‘ಬೆಥೆಲ್ ಗಾಸ್ಪೆಲ್ ಚಾರಿಟೆಬಲ ಟ್ರಸ್ಟ’ನ ಚರ್ಚನಲ್ಲಿ ಅನುಮತಿಯಿಲ್ಲದೇ ಬಾಲಗೃಹ ನಡೆಸುವ ಪಾದ್ರಿ(ಪಾಸ್ಟರ) ರಾಜಕುಮಾರ ಯೇಶುದಾಸನ ಇನ್ನೂ ೩ ಬಾಲಕಿಯರ ಲೈಂಗಿಕ ಶೋಷಣೆ ಮಾಡಿರುವುದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ರೆಡ್ಡಿಯವರು ಸ್ವತಃ ಎನ್.ಆರ್.ಐ. ಪೊಲೀಸ ಠಾಣೆಯಲ್ಲಿ ಯೇಶುದಾಸನರ ವಿರುದ್ಧ ಲೈಂಗಿಕ ಶೋಷಣೆಯ ಇನ್ನೂ ೩ ದೂರು ದಾಖಲಿಸಲಾಗಿದೆ. ಈ ದೂರಿನ ಮೇಲೆ ೩ ಸ್ವತಂತ್ರ ತಕರಾರು ನೊಂದಾಯಿಸಲಾಗಿದೆ. ಇದರಿಂದ ‘ಚರ್ಚ ಮೂಲಕ ನಡೆಸಲಾಗುತ್ತಿರುವ ಬಾಲಗೃಹದಲ್ಲಿ ಯಾರ ಲೈಂಗಿಕ ಶೋಷಣೆ ನಡೆದಿಲ್ಲ’, ಎಂದು ಪತ್ರಿಕಾ ಪರಿಷತ್ತಿನಲ್ಲಿ ಹೇಳುವ ಎ.ಆರ್.ಕೆ. ಫೌಂಡೇಶನ ಹೇಳಿಕೆ ಸುಳ್ಳು ಎಂದು ಕಂಡು ಬಂದಿದೆ.

೧. ಈ ಹಿಂದೆ ಚರ್ಚನ ಬಾಲಗೃಹದಿಂದ ಬಿಡುಗಡೆ ಮಾಡಲಾಗಿದ್ದ ಒಬ್ಬ ೧೪ ವರ್ಷದ ಬಾಲಕಿಯ ಲೈಂಗಿಕ ಶೋಷಣೆ ಮಾಡಿರುವುದು ಬಹಿರಂಗವಾದ ಬಳಿಕ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಧಿಕಾರಿಯು ಅಗಸ್ಟ ತಿಂಗಳಿನಲ್ಲಿ ಎನ್.ಆರ್.ಐ. ಪೊಲೀಸ ಠಾಣೆಯಲ್ಲಿ ಯೇಶುದಾಸನ ವಿರುದ್ಧ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದರು. ಇದರಿಂದ ಯೇಶುದಾಸನ ವಿರುದ್ಧ ಈಗ ಈ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಪೋಕ್ಸೊ ಕಲಂ ಅನುಸಾರ ಒಟ್ಟು ೪ ದೂರು ದಾಖಲಿಸಲಾಗಿದೆ.

೨. ಅಗಸ್ಟ ತಿಂಗಳಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯು ಈ ಚರ್ಚ ಮೇಲೆ ದಾಳಿ ನಡೆಸಿ ೪೫ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ೧೩ ಬಾಲಕಿಯರ ಸಮಾವೇಶವಿತ್ತು. ಆಗಿನಿಂದ ಯೇಶುದಾಸನನ್ನು ಬಂಧನದಲ್ಲಿಡಲಾಗಿದೆ.

೩. ಈ ಪ್ರಕರಣದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡಿರುವ ಹೆಚ್ಚಿನ ತನಿಖೆಯಲ್ಲಿ ಪಾದ್ರಿ ಯೇಶುದಾಸನ ಲೈಂಗಿಕ ಶೋಷಣೆ ಮಾಡಿರುವ ಮಾಹಿತಿ ಇನ್ನೂ ೩ ಅಪ್ರಾಪ್ತ ವಯಸ್ಸಿನ ಬಾಲಕಿಯರು ನೀಡಿದರು. ಇದರಲ್ಲಿ ೧೩ ಮತ್ತು ೧೪ ವರ್ಷದ ೨ ಸಹೋದರಿಯರು ಸೇರಿದ್ದಾರೆ. ಅವರು ರಾಜಸ್ಥಾನದವರಾಗಿದ್ದಾರೆ.

೪. ಹಾಗೆಯೇ ಒಬ್ಬ ೧೦ ವರ್ಷ ವಯಸ್ಸಿನ ಬಾಲಕಿಯೂ ಇದೇ ರೀತಿಯ ಮಾಹಿತಿಯನ್ನು ನೀಡಿದಳು. ನಗರದ ವಸತಿಗೃಹ ಬಾಲಗೃಹ ನಡೆಸಲು ಸರಕಾರದಿಂದ ಅನುಮತಿ ಪಡೆಯಬೇಕು. ಇಲ್ಲವಾದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ರೆಡ್ಡಿ ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪ್ರಸಾರ ಮಾಧ್ಯಮಗಳು ಇಂತಹ ಸುದ್ದಿಗಳನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಪ್ರಸಾರ ಮಾಡುವುದಿಲ್ಲ ? ಒಂದು ವೇಳೆ ಹಿಂದೂ ಸಂತರ ಮೇಲೆ ಈ ರೀತಿಯ ಸುಳ್ಳು ಆರೋಪಗಳು ಆದಾಗ, ಈ ಸುದ್ದಿ ‘ಬ್ರೇಕಿಂಗ ನ್ಯೂಸ’ ಎಂದು ತೋರಿಸಲಾಗುತ್ತಿತ್ತು !