ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಹಿಂದೂ ಯುವಕನ ಕೊಲೆ

ಕೊಂದು ಶವವನ್ನು ಮರಕ್ಕೆ ನೇತು ಹಾಕಿದರು !

ಬರೇಲಿ (ಉತ್ತರ ಪ್ರದೇಶ) – ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಸುನೀಲ ಕುಮಾರ ಎಂಬ ೨೨ ವರ್ಷದ ಯುವಕನನ್ನು ಕೊಂದು ಮರಕ್ಕೆ ನೇಣು ಹಾಕಲಾಗಿದೆ. ಮೃತದೇಹದ ಬಾಯಿಗೆ ಬಟ್ಟೆ ತುರುಕಿಸಲಾಗಿತ್ತು ಹಾಗೂ ಕೈಕಾಲು ಕಟ್ಟಲಾಗಿತ್ತು. ಈ ಪ್ರಕರಣದಲ್ಲಿ ೬ ಜನರ ವಿರುದ್ಧ ಪೊಲೀಸರು ಅಪರಾಧ ದಾಖಲಿಸಿದ್ದು, ಕೆಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.


ಸುನೀಲ ಕುಮಾರ ಇವರ ತಂದೆ ಆಶಾರಾಮ ಇವರು, “ಸುನೀಲ ಗ್ರಾಮದ ನಿಸಾರ ಅಹಮದ ಅವರ ಮಗಳೊಂದಿಗೆ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ನಿಸಾರ ಜತೆ ವಾಗ್ವಾದವೂ ನಡೆದಿತ್ತು. ಪಂಚಾಯತ ವಿವಾದವನ್ನು ಇತ್ಯರ್ಥಪಡಿಸಿತು; ಆದರೆ ನಿಸಾರ ಸೇಡು ಇಟ್ಟುಕೊಂಡಿದ್ದ. ಸೆಪ್ಟೆಂಬರ್ ೨ ರ ರಾತ್ರಿ, ನನ್ನ ಮಗನ ಸಂಖ್ಯೆಯಿಂದ ನನಗೆ ವಾಟ್ಸಾಪ್‌ನಲ್ಲಿ ಧ್ವನಿ ಸಂದೇಶ ಬಂದಿದೆ. ಇದರಲ್ಲಿ ನನ್ನ ಮಗ ‘ನನ್ನನ್ನು ಬಿಟ್ಟುಬಿಡು. ಸರಪಂಚರು ನಿರ್ಣಯ ಕೈಗೊಂಡಿದ್ದಾರೆ. ನನ್ನನ್ನು ಏಕೆ ಹೊಡೆಯುತ್ತಿದ್ದೀರಿ ?’ ನನ್ನ ಮಗನನ್ನು ರಾತ್ರಿ ೧೧ ಗಂಟೆಗೆ ಕೋಣೆಯಲ್ಲಿ ಮಲಗಿರುವುದನ್ನು ನಾನು ನೋಡಿದೆ; ಆದರೆ ನಂತರ ಹೇಗೆ ಹೊರಗೆ ಹೋದ ಎಂಬುದು ಅರ್ಥವಾಗಿಲ್ಲ. ಫಜಲ್, ಯಾಸಿನ್, ಗುಡ್ಡು ಅಲಿಯಾಸ್ ಅಬ್ರಾರ್, ಇಸ್ರಾರ್ ಅಹಮದ್, ಅಬ್ರಾರ್ ಅಹಮದ್, ಸರ್ಫ್ರಾಜ್ ಅಹಮದ್ ಸೇರಿ ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದ್ದಾರೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರ ಪ್ರಕಾರ ಮುಸ್ಲಿಂ ಯುವಕ ಹಿಂದೂ ಹುಡುಗಿಯನ್ನು ಪ್ರೀತಿಸಿದರೆ ಅದು ‘ಪ್ರೀತಿ’ ಮತ್ತು ಹಿಂದೂ ಯುವಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದರೆ ಅದು ದ್ವೇಷವಿರುತ್ತದೆ. ಅದಕ್ಕೇ ಇಂತಹ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !