ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳನ್ನು ತೆಗೆದುಹಾಕಿರಿ !

ಭಾಜಪದ ಹಿರಿಯ ಮುಖಂಡ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ನವ ದೆಹಲಿ – ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಜಾತ್ಯತೀತ’ (ಸೆಕ್ಯುಲಿರಸಂ) ಮತ್ತು ‘ಸಮಾಜವಾದ’(ಸೋಶಲಿಸಂ) ಈ ಶಬ್ದವನ್ನು ತೆಗೆದುಹಾಕಬೇಕು, ಎನ್ನುವ ಅರ್ಜಿಯನ್ನು ಭಾಜಪದ ಮಾಜಿ ಸಂಸದ ಹಾಗೂ ಹಿರಿಯ ಮುಖಂಡ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಸಪ್ಟೆಂಬರ ೨೩ ರಂದು ಆಲಿಕೆ ಆಗಲಿದೆ. ಅದರೊಂದಿಗೆ ಇದಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಇನ್ನಿತರೆ ಅರ್ಜಿಗಳ ಮೇಲೆಯೂ ಆಲಿಕೆ ನಡೆಯಲಿದೆ. ‘ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಂದರೆ ೧೯೭೬ ರಲ್ಲಿ ೪೨ನೇ ಕಲಂನಲ್ಲಿ ಬದಲಾವಣೆ ಮಾಡಿ ಪ್ರಸ್ತಾವನೆಯಲ್ಲಿ ಈ ಶಬ್ದವನ್ನು ಸೇರಿಸಿದ್ದರು’, ಎಂದು ಈ ಅರ್ಜಿಯಲ್ಲಿ ನಮೂದಿಸಲಾಗಿದೆ.

೧. ಡಾ. ಸ್ವಾಮಿಯವರು ಅರ್ಜಿಯಲ್ಲಿ ಕೇಶವಾನಂದ ಭಾರತಿಯವರ ಪ್ರಕರಣದ ಉದಾಹರಣೆಯನ್ನು ನೀಡಿ ‘ಪ್ರಸ್ತಾವನೆಯು ಈ ಕಲಂನ ಮೂಲ ಪ್ರತಿಯ ಒಂದು ಭಾಗವಾಗಿದೆ, ಅದರಲ್ಲಿ ಬದಲಾವಣೆ ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ’, ಎಂದು ಹೇಳಿದ್ದಾರೆ.

೨. ಈ ಹಿಂದೆಯೂ ನ್ಯಾಯವಾದಿ ವಿಷ್ಣು ಶಂಕರ ಜೈನರವರು ಜುಲೈ ೨೦೨೦ ರಲ್ಲಿ ಮೇಲಿನಂತೆ ಅರ್ಜಿಯನ್ನು ದಾಖಲಿಸಿದ್ದರು. ಅದರಲ್ಲಿ ‘ಜಾತ್ಯತೀತ ಮತ್ತು ಸಮಾಜವಾದವು ರಾಜಕೀಯ ವಿಚಾರವಾಗಿದ್ದು ಅದನ್ನು ನಾಗರಿಕರ ಮೇಲೆ ಹೇರಲಾಗುತ್ತಿದೆ. ಈ ವಿಚಾರ ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿಚಾರಗಳ ವಿರುದ್ಧವಾಗಿದೆ. ಸಂವಿಧಾನದ ಕಲಂ ೧೯(೧)(ಅ) ನಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಲಂ ೨೫ರಲ್ಲಿ ಧರ್ಮ ಸ್ವಾಯತ್ತತೆ ಅಧಿಕಾರಗಳ ಉಲ್ಲಂಘನೆಯ ದೃಷ್ಟಿಯಿಂದಲೂ ಇದು ಅನಧಿಕೃತವಾಗಿದೆ’, ಎಂದು ಅವರು ಹೇಳಿದ್ದರು.

ಸಂಪಾದಕೀಯ ನಿಲುವು

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರ ತಾನಾಗಿಯೇ ಈ ಶಬ್ದಗಳನ್ನು ತೆಗೆದುಹಾಕಬೇಕು ಎಂದು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗೆ ಅನಿಸುತ್ತದೆ !