ದೇಶಾದ್ಯಂತ ಎರಡು ಸಾವಿರ ಸ್ಥಳಗಳಲ್ಲಿ ‘ಹಿಂದೂ ರಾಷ್ಟ್ರದ ಪ್ರತಿಜ್ಞೆ’ ತೆಗೆದುಕೊಳ್ಳಲಾಗುವುದು
ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೦ ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಕಾರ್ಯವನ್ನು ಮಾಡುತ್ತಿದೆ. ಈ ವರ್ಷ ೨೬ ಸೆಪ್ಟೆಂಬರ್ ೨೦೨೨ ರಂದು ಅಂದರೆ ಘಟಸ್ಥಾಪನೆಯ ದಿನ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ೨೦ ವರ್ಷಗಳು ಪೂರ್ಣವಾಗುತ್ತಿದೆ. ಈ ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಸಮಿತಿಯ ವತಿಯಿಂದ ದೇಶಾದ್ಯಂತ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನವು ೩೧ ಆಗಸ್ಟ್‌ನಿಂದ ೮ ನವೆಂಬರ್ ೨೦೨೨ ರವರೆಗೆ ನಡೆಯುವುದು. ಈ ಅಭಿಯಾನದಲ್ಲಿ ದೇಶಾದ್ಯಂತ ೨೦೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಹಿಂದೂ ರಾಷ್ಟ್ರದ ಪ್ರತಿಜ್ಞೆ’ ತೆಗೆದುಕೊಳ್ಳಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಮಾಹಿತಿ ನೀಡಿದ್ದಾರೆ.
ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ವಿವಿಧ ಉಪಕ್ರಮಗಳು !
‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ದಲ್ಲಿ ‘ಹಿಂದೂ ರಾಷ್ಟ್ರದ ಅವಶ್ಯಕತೆ’, ‘ಹಿಂದೂ ಧರ್ಮದ ಮಹಾನತೆ’, ‘ಶೌರ್ಯ ಜಾಗೃತಿಯ ಅಗತ್ಯ’, ‘ಲವ್ ಜಿಹಾದ್’, ‘ಹಲಾಲ್ ಜಿಹಾದ್’ ಇತ್ಯಾದಿ ವಿಷಯಗಳಲ್ಲಿ ೩೦೦೦ ಸ್ಥಳಗಳಲ್ಲಿ ಪ್ರವಚನಗಳು, ೨೦೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ. ೧೦೦೦ ದೇವಾಲಯಗಳ ಮತ್ತು ೨೫೦ ಐತಿಹಾಸಿಕ ಸ್ಥಳಗಳ ಸ್ವಚ್ಛತೆ, ೩೫೦ ಮಹಿಳಾ ಸಂಘಟನೆಗಳ ಉಪಕ್ರಮ ಮತ್ತು ೨೦೦ ಸ್ಥಳಗಳಲ್ಲಿ ಮಹಿಳೆಯರಿಗೆ ಸ್ವರಕ್ಷಣೆಯ ತರಬೇತಿ ಉಪಕ್ರಮಗಳನ್ನು ನಡೆಸಲಾಗುವುದು. ಅಲ್ಲದೇ ೩೦ ಕ್ಕೂ ಹೆಚ್ಚು ‘ಹಿಂದೂ ರಾಷ್ಟ್ರ ಸಂಘಟನೆ ಸಮ್ಮೇಳನ’, ೫೦ ಕಡೆಗಳಲ್ಲಿ ‘ವರ್ಧ್ಯಂತ್ಯುತ್ಸವ ಸಮಾರಂಭಗಳು’, ೫೦ ಕಡೆಗಳಲ್ಲಿ ಹಿಂದೂ ರಾಷ್ಟ್ರ ವಿಚಾರ ಸಂಕಿರಣ, ೭೦ ಕಡೆ ಬೀದಿ ನಾಟಕಗಳು, ೨೦೦ ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಸಭೆಗಳು, ೬೦ ಕ್ಕೂ ಹೆಚ್ಚು ವಕೀಲರ ಸಭೆ ಇತ್ಯಾದಿ ಉಪಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುವುದು. ಈ ಉಪಕ್ರಮಗಳನ್ನು ಹಿಂದೂ ಸಮಾಜದ ಮನಸ್ಸಿನಲ್ಲಿ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಬಲಪಡಿಸುವ ಮತ್ತು ಹಿಂದೂ ಸಮಾಜವು ಹಿಂದೂ ರಾಷ್ಟ್ರಕ್ಕಾಗಿ ಸಕ್ರಿಯವಾಗಬೇಕು ಈ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದೆ, ಎಂದು ಶ್ರೀ. ಶಿಂದೆ ಇವರು ಹೇಳಿದರು.
ಈ ಅಭಿಯಾನವನ್ನು ಚಿಪಳೂಣ (ರತ್ನಾಗಿರಿ ಜಿಲ್ಲೆ, ಮಹಾರಾಷ್ಟ್ರ)) ಇಲ್ಲಿನ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಶ್ರೀಫಲ ಮತ್ತು ಹೂವಿನ ಹಾರವನ್ನು ಅರ್ಪಿಸುವ ಮೂಲಕ ಪ್ರಾರಂಭಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ರಾಜ್ಯಾಭಿಷೇಕದ ಮೊದಲು ಶ್ರೀ ಪರಶುರಾಮನಿಗೆ ಮಹಾಪೂಜೆಯನ್ನು ಮಾಡಿದ್ದರು. ಸಮರ್ಥ ರಾಮದಾಸಸ್ವಾಮಿಯವರು ಶ್ರೀ ಪರಶುರಾಮ ದೇವಸ್ಥಾನದ ಮುಂಭಾಗದಲ್ಲಿ ದಕ್ಷಿಣಾಭಿಮುಖ ಹನುಮಂತ ದೇವಸ್ಥಾನವನ್ನು ನಿರ್ಮಿಸಿದ್ದರು. ಇಂತಹ ಸ್ಥಳದಲ್ಲಿ ಸಮಿತಿಯ ದ್ವಿದಶಕ ಪೂರ್ಣಗೊಳಿಸಿದ ನಿಮಿತ್ತ ಸಂಪೂರ್ಣ ಭಾರತದಲ್ಲಿ ಹಮ್ಮಿಕೊಳ್ಳಳಾಗುವ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ದ ಶುಭಾರಂಭವಾಗುವುದು ಇದು ಶುಭ ಸಂಕೇತವಾಗಿದೆ ಎಂದೇ ಹೇಳಬೇಕಾಗುತ್ತದೆ, ಎಂದು ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.
೨೦೦೨ ನೇ ಇಸ್ವಿಯಲ್ಲಿ ರತ್ನಾಗಿರಿಯಲ್ಲಿ ಧರ್ಮದ್ರೋಹಿ ಸಂಘಟನೆಯೊಂದು ದೇವತೆಗಳ ವಿಡಂಬನೆ ಮಾಡಲು ಕಾರ್ಯಕ್ರಮವನ್ನು ಆಯೋಜಿಸಿತ್ತು, ಅದರ ವಿರುದ್ಧ ಉತ್ಸಾಹದಿಂದ ಧ್ವನಿಯೆತ್ತಿದ ಹಿಂದೂ ಸಂಘಟನೆಯು ಇಂದು ೨೦ ವರ್ಷಗಳಲ್ಲಿ ವಟವೃಕ್ಷದಂತೆ ಬೆಳೆದಿದೆ. ಕಳೆದ ೨೦ ವರ್ಷಗಳಿಂದ ಮಾಡಿದ ನಿರಂತರ ಜಾಗೃತಿಯಿಂದಾಗಿ, ರಾಜ್ಯದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಹಿಂದೂಗಳ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ತಡೆಯಲು ಹಿಂದೂಗಳು ಸಕ್ರಿಯರಾಗಿರುವುದು ಕಂಡು ಬರುತ್ತಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಹಿಂದೂಸಂಘಟನೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಈ ಪಂಚಸೂತ್ರಗಳ ಆಧಾರದಲ್ಲಿ ವರ್ಷವಿಡೀ ವಿವಿಧ ಉಪಕ್ರಮಗಳನ್ನು ನಡೆಸಲಾಗುತ್ತಿದೆ. ಇದೆಲ್ಲವೂ ಈಶ್ವರನ ಕೃಪೆ, ಸಂತರ ಆಶೀರ್ವಾದ ಮತ್ತು ಹಿಂದುತ್ವನಿಷ್ಠರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಡೆಯುತ್ತಿದೆ ಎಂದು ಕೃತಜ್ಞತಾಪೂರ್ವಕ ಭಾವನೆಯನ್ನು ಶ್ರೀ. ಶಿಂದೆ ಇವರು ಈ ವೇಳೆ ವ್ಯಕ್ತಪಡಿಸಿದರು.