ಪ್ರಯಾಗರಾಜನ ಸಂಗಮದಲ್ಲಿ ನೌಕೆಯಲ್ಲಿ ಕುಳಿತು ಮಾಂಸಹಾರ ಸೇವಿಸಿರುವ ಮತಾಂಧರ ವಿರುದ್ಧ ದೂರು ದಾಖಲು : ಮೂವರ ಬಂಧನ

ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿಯ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿನ ನಾಗವಾಸುಕಿ ದೇವಸ್ಥಾನದ ಹತ್ತಿರ ಕೆಲವು ಜನರು ನೌಕೆಯಲ್ಲಿ ಕುಳಿತು ಮಾಂಸಹಾರ ಮತ್ತು ಹುಕ್ಕಾಸೆದುವ ವಿಡಿಯೋ ಪ್ರಸಾರಗೊಂಡಿದೆ. ಇದನ್ನು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿದ್ದರು. ಇದರ ನಂತರ ಪೊಲೀಸರು ಹುಡುಕಾಟ ನಡೆಸಿ ೮ ಜನರ ಮೇಲೆ ದೂರು ದಾಖಲಿಸಿ, ಮೂರು ಮತಾಂಧರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಒಂದೇ ಒಂದು ಅವಕಾಶವನ್ನೂ ಮತಾಂಧರು ಬಿಡುವುದಿಲ್ಲ ! ಈ ವಿಷಯದ ಬಗ್ಗೆ ಜಾತ್ಯತೀತರು ಮೌನ ವಹಿಸುತ್ತಾರೆ, ಇದನ್ನು ಅರಿಯಬೇಕು !