ಪುಲ್ವಾಮಾದಲ್ಲಿ ಬಂಗಾಲಿ ಕಾರ್ಮಿಕನ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ

ಪುಲ್ವಾಮಾ (ಜಮ್ಮು ಕಾಶ್ಮೀರ) – ಇಲ್ಲಿಯ ಒಬ್ಬ ಕಾರ್ಮಿಕನ ಮೇಲೆ ಜಿಹಾದಿ ಭಯೋತ್ಪಾದಕನು ನಡೆಸಿರುವ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಕಾರ್ಮಿಕನ ಹೆಸರು ಮುನಿರುಲ್ ಇಸ್ಲಾಂ ಎಂದಾಗಿದ್ದು ಅವನು ಬಂಗಾಲದ ನಿವಾಸಿಯಾಗಿದ್ದಾನೆ. ಗುಪ್ತಚರ ಇಲಾಖೆಯ ಹೇಳಿಕೆಯ ಪ್ರಕಾರ ಗುರಿಯಾಗಿಸಿ ಕೊಲೆ ಮಾಡುವುದು, ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವುದು ಇದು ಪಾಕಿಸ್ತಾನದ ಹೊಸ ಯೋಜನೆಯಾಗಿದೆ. ಕಲಂ ೩೭೦ ತೆರವುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿನ ಕಾಶ್ಮೀರಿ ಹಿಂದೂಗಳ ಪುನರ್ವಸನದ ಯೋಜನೆ ಹಾಳು ಮಾಡುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.