ತಮಿಳುನಾಡಿನ ಆಢಳಿತಾರೂಢ ದ್ರಮುಕನ ಸಹಾಯಕ ಪಕ್ಷದಿಂದ ತಮಿಳುನಾಡವನ್ನು ಭಾರತದಿಂದ ಬೇರ್ಪಡಿಸುವ ಘೋಷಣೆ !

ಸನಾತನ ಧರ್ಮದ ವಿರುದ್ಧ ಅಭಿಯಾನಕ್ಕೆ ಚಾಲನೆ !

(ದ್ರಮುಕ ಎಂದರೆ ದ್ರಾವಿಡ ಮುನ್ನೆತ್ರ ಕಳಘಮ್ ಅಂದರೆ ದ್ರವೀಡ ಪ್ರಗತಿ ಸಂಘ)

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಆಡಳಿತಾರೂಢ ದ್ರಮುಕ ಪಕ್ಷಕ್ಕೆ ಬೆಂಬಲ ನೀಡುವ ‘ವಿದುಥಾಲಾಯಿ ಚಿರುತೈಗಲ ಕಚ್ಚಿ’ ಎಂದರೆ ‘ವಿಸೀಕೆ’ಯ ಮುಖಂಡನು ತಮಿಳುನಾಡವನ್ನು ಭಾರತದಿಂದ ಬೇರ್ಪಡಿಸುವ ಘೋಷಣೆ ಮಾಡಿದ್ದಾರೆ. ‘ವಿಸೀಕೆ’ಯ ಉಪಮಹಾಸಚಿವ ವನ್ನಿ ಅರಾಸು ಇವರು ಆಗಸ್ಟ್ ನಲ್ಲಿ ಒಂದು ಸಭೆಯಲ್ಲಿ ಜನರಿಗೆ ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ರಾಜ್ಯದ ಭಾಜಪದ ಅಧ್ಯಕ್ಷ ಅಣ್ಣಾಮಲೈ ಇವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಎಮ್.ಕೆ. ಸ್ಟಾಲಿನ್ ಇವರ ನೇತೃತ್ವದ ತಮಿಳುನಾಡು ಸರಕಾರವನ್ನು ಆರೋಪಿಸುತ್ತಾ, ಇಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸರಕಾರ ಅವರನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.

೧. ಈ ವಿಡಿಯೋದಲ್ಲಿ ಆರಾಸು, ಭಾರತದಿಂದ ರಾಜ್ಯವನ್ನು ಬೇರ್ಪಡಿಸುವ ಅಭಿಯಾನವನ್ನು ಆಗಸ್ಟ್ ೧೭ ರಿಂದ ಮುಂದಿನ ವರ್ಷ ಆಗಸ್ಟ್ ೧೭ ವರೆಗೆ ವಿಸ್ತರಿಸಲಾಗುವುದು. ಈ ಕಾಲಾವಧಿಯಲ್ಲಿ ನಾವು ಸನಾತನ ಧರ್ಮದ ವಿರುದ್ಧ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡುವೆವು. ಯುವಕರನ್ನು ಆಂದೋಲನಕ್ಕೆ ಜೋಡಿಸುವೆವು. ಪೆರಿಯಾರ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ ಇವರ ಬಗ್ಗೆ ಮಾಹಿತಿ ನೀಡುವೆವು. ಸನಾತನ ಧರ್ಮದ ವಿರುದ್ಧ ನಮಗೆ ನಮ್ಮ ಪ್ರಾಣ ಹೋದರು ನಮಗೆ ಅದರ ಬಗ್ಗೆ ಏನು ಅನಿಸುವುದಿಲ್ಲ.

೨. ಈ ಹೇಳಿಕೆಯ ಬಗ್ಗೆ ಭಾಜಪ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದೆ. ರಾಜ್ಯದ ಭಾಜಪ ಸಚಿವರಾದ ಎಸ್.ಜಿ. ಸೂರ್ಯ ಇವರು ಮಾತನಾಡುತ್ತಾ, ಅಂಬೇಡ್ಕರ್ ಇವರು ಎಂದು ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡಿಡಿಲ್ಲ. ಅವರು ದೇಶವನ್ನು ಜೋಡಿಸುವ ಕೆಲಸ ಮಾಡಿದ್ದಾರೆ, ಅವರು ಸಂವಿಧಾನ ಬರೆದರು. ವಿಸಿಕೆ ಪಕ್ಷ ಯಾವಾಗಲೂ ಈ ರೀತಿಯ ಹೇಳಿಕೆ ನೀಡುತ್ತಿದೆ; ಆದರೆ ಸನಾತನ ಧರ್ಮದ ವಿರುದ್ಧ ಅರಾಸು ಇವರು ನೀಡಿರುವ ಹೇಳಿಕೆಗಳು ಬಹಳ ಖಂಡನೀಯವಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಇವರು ಹೇಳಿಕೆಯ ಮೇಲೆ ಅವರ ಅಭಿಪ್ರಾಯ ಮಂಡಿಸಬೇಕು ಹಾಗೂ ಅರಾಸು ಇವರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

೩. ಇನ್ನೊಂದು ಕಡೆಗೆ ‘ವಿಸಿಕೆ’ ಪಕ್ಷದ ವಕ್ತಾರ ವಿಕ್ರಮನ್ ಇವರು ಮಾತ್ರ ಅರಾಸು ಇವರ ಪರ ಮಾತನಾಡಿದ್ದಾರೆ. ಅರಾಸು ಇವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗುತ್ತಿದೆ, ಅವರ ಅಭಿಪ್ರಾಯ, ದೇಶದಲ್ಲಿನ ಇತರ ರಾಜ್ಯದ ತುಲನೆಯಲ್ಲಿ ತಮಿಳುನಾಡು ಪಡೆದಿರುವ ಯಶಸ್ಸು ಬಹಳ ದೊಡ್ಡದಾಗಿದೆ. ಸನಾತನ ಧರ್ಮದ ಮೇಲೆ ನಡೆಸಿರುವ ಕೆಸರು ಎರಚಾಟದ ಬಗ್ಗೆ ವಿಕ್ರಮನ್ ಇವರು, ಯಾವುದೇ ರಾಜಕೀಯ ಪಕ್ಷವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪ್ರಸಾರ ಮಾಡುತ್ತದೆ ಅದು ಅಂತಹ ಹೇಳಿಕೆಯನ್ನು ಯಾವಾಗಲೂ ವಿರೋಧಿಸುತ್ತದೆ, ಎಂದು ಅವರು ಹೇಳಿದರು.(ಮಾತಿನ ಮಲ್ಲ ಎಂಬ ಗಾದೆಯನ್ನು ನಿಜಗೊಳಿಸುವ ಹಿಂದೂ ದ್ವೇಷಿ ‘ವಿಸಿಕೆ’ ಪಕ್ಷ ! – ಸಂಪಾದಕರು)

ಸಂಪಾದಕೀಯ ನಿಲುವು

ದ್ರಮುಕ ಪಕ್ಷ ಅಧಿಕಾರಕ್ಕೆ ಬಂದ ನಂತರ ತಮಿಳುನಾಡಿನಲ್ಲಿ ಪ್ರತ್ಯೇಕತೆ ಮತ್ತು ಹಿಂದೂ ದ್ವೇಷದ ಚಳವಳಿಗೆ ವೇಗ ಬಂದಿದೆ ಮತ್ತು ಅದಕ್ಕೆ ಸರಕಾರದಿಂದ ಬೆಂಬಲ ಸಿಗುತ್ತಿದೆ ಇದು ಕೂಡ ಅಷ್ಟೆ ಸತ್ಯ !

ಖಲಿಸ್ಥಾನಿಗಳಿಂದ ಪ್ರತ್ಯೇಕ ಖಲಿಸ್ಥಾನ, ಮತಾಂಧ ಮುಸಲ್ಮಾನರಿಂದ ‘ಇಸ್ಲಾಮಿಸ್ಥಾನ’ದ ಹಾಗೂ ಕ್ರೈಸ್ತರಿಂದ ಪೂರ್ವೊತ್ತರ ರಾಜ್ಯಗಳಲ್ಲಿ ಕ್ರೈಸ್ತ ರಾಷ್ಟ್ರ ನಿರ್ಮಿಸುವ ಭಾಷೆ ಮಾತನಾಡಲಾಗುತ್ತದೆ ಮತ್ತು ಅದಕ್ಕಾಗಿ ಕೃತಿಶೀಲ ಕಾರ್ಯ ಯೋಜನೆಗಳು ಸಿದ್ಧವಾಗುತ್ತಿರುವುದು ಬೆಳಕಿಗೆ ಬಂದಿದೆ. ಈಗ ತಮಿಳುನಾಡಿನಲ್ಲಿ ಪ್ರತ್ಯೇಕವಾದಿಯ ವಿಷ ಬೆರೆಸಲಾಗುತ್ತಿದೆ. ಇದೆಲ್ಲಾ ನಿಲ್ಲಬೇಕು ಎಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !