ಅಪ್ರಾಪ್ತ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಕ್ರೈಸ್ತ ಪಾದ್ರಿಗೆ ಜೀವಾವಧಿ ಶಿಕ್ಷೆ !

ತಿರುವನಂತಪುರಂ (ಕೇರಳ) – ಓರ್ವ ೧೩ ವಯಸ್ಸಿನ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಜೋಶ ಪ್ರಕಾಶ ಎಂಬ ಕ್ರೈಸ್ತ ಪಾದ್ರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ರಾಜ್ಯದಲ್ಲಿನ ಮಂಜೇರಿ ಇಲ್ಲಿಯ ‘ಪೋಕ್ಸೋ’ ನ್ಯಾಯಾಲಯವು ಈ ಶಿಕ್ಷೆಯ ಜೊತೆಗೆ ೫೧ ವಯಸ್ಸಿನ ಪಾದ್ರಿಗೆ ಸಂತ್ರಸ್ತೆಗೆ ಎರಡುವರೆ ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶ ಸಹ ನೀಡಿದೆ. ಕ್ರೈಸ್ತ ಧರ್ಮದಲ್ಲಿ ‘ಪೇಂಟಿಕೋಸ್ಟಲ್’ ಪಂಥದ ಈ ಪಾದ್ರಿ ತಿರುವನಂತಪುರ ಹತ್ತಿರ ಇರುವ ಬಲರಾಮಪುರದ ನಿವಾಸಿ ಆಗಿದ್ದಾನೆ.

೧. ಬಲಾತ್ಕಾರದ ಘಟನೆಯ ೨೦೧೬ ರಲ್ಲಿ ನಡೆದಿದ್ದು ಪಾದ್ರಿ ಮಲ್ಲಪುರಂದಲ್ಲಿ ಒಂದು ಕ್ರೈಸ್ತ ಕಾರ್ಯಕ್ರಮಕ್ಕಾಗಿ ಹೋಗಿದ್ದನು. ಅಲ್ಲಿ ಬಂದಿರುವ ಸಂತ್ರಸ್ತೆಯ ಪೋಷಕರಿಗೆ, ‘ನಿಮ್ಮ ಮಕ್ಕಳಿಗೆ ಕೆಟ್ಟ ಶಕ್ತಿಯಿಂದ ತೊಂದರೆ ಆಗಿದೆ, ಅದಕ್ಕಾಗಿ ‘ವಿಶೇಷ ಪ್ರಾರ್ಥನೆ’ ಮಾಡುವುದು ಅವಶ್ಯಕವಾಗಿದೆ.’ ಎಂದು ಹೇಳಿದ್ದನು.

೨. ಇದನ್ನು ಕೇಳಿ ಗಾಬರಿಗೊಂಡಿರುವ ಪೋಷಕರು ಪಾದ್ರಿಯನ್ನು ಮನೆಗೆ ಆಮಂತ್ರಿಸಿದರು. ಪಾದ್ರಿಯು ಹುಡುಗಿಯನ್ನು ಶಯನ ಕಕ್ಷಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ನಡೆಸಿದನು. ಆಕೆ ಬಾಯಿ ಬಿಡಬಾರದೆಂದು ಪಾದ್ರಿ ಆಕೆಗೆ ‘ಬಾಯಿ ತೆರೆದರೆ ದೇವರ ಕೋಪ ಎದುರಿಸಬೇಕಾಗುತ್ತದೆ’, ಎಂದು ಹೇಳಿ ಬೆದರಿಸಿದ್ದನು.

೩ .ಒಂದು ದಿನ ಸಂತ್ರಸ್ತೇಯ ತಾಯಿಗೆ ಅನುಮಾನ ಬಂದಿತು. ಆಕೆ ಹುಡುಗಿಯನ್ನು ಇದರ ಬಗ್ಗೆ ಪ್ರಶ್ನಿಸಿದಾಗ ಸಂತ್ರಸ್ತೇ ಆಕೆಯ ತಾಯಿಗೆ ನಡೆದಿರುವ ವಿಷಯ ತಿಳಿಸಿದಳು.

೪. ಪೋಷಕರು ಈ ಘಟನೆಯ ದೂರು ಪೊಲೀಸರಿಗೆ ನೀಡಿದ ನಂತರ ಪಾದ್ರಿಯನ್ನು ಬಂಧಿಸಲಾಯಿತು.

ಸಂಪಾದಕೀಯ ನಿಲುವು

ಕ್ರೈಸ್ತ ಪಾದ್ರಿಯ ಬದಲು ಒಬ್ಬ ಹಿಂದೂ ಸಾಧುವಿಗೆ ಈ ರೀತಿ ಶಿಕ್ಷೆ ಆಗುತ್ತಿದ್ದರೆ, ಇಷ್ಟೊತ್ತಿಗೆ ಸಂಪೂರ್ಣ ‘ಜಾತ್ಯಾತೀತರು’ ಭಾರತವು ಹಿಂದೂ ಧರ್ಮದ ಮೇಲೆಯೇ ಕೆಸರು ಎರಚಲು ಪ್ರಾರಂಭಿಸುತ್ತಿದ್ದರು ! ಪ್ರಸಾರ ಮಾಧ್ಯಮದವರು ಆಕಾಶ ಪಾತಾಳ ಒಂದು ಮಾಡಿ ಹಿಂದೂ ಸಂತರನ್ನು ಟೀಕಿಸುತ್ತಿದ್ದರು ! ಈಗ ಶಿಕ್ಷೆ ನೀಡಲಾಗಿರುವ ಕ್ರೈಸ್ತ ಪಾದ್ರಿ ಆಗಿರುವುದರಿಂದ ಎಲ್ಲೆಡೆ ಶಾಂತಿ ಇದೆ. ಎಷ್ಟು ಹಿಂದುಗಳಿಗೆ ಈ ಶಾಂತಿಯ ತೊಂದರೆ ಆಗುತ್ತದೆ ?