ಅಸ್ಸಾಂನಲ್ಲಿ ಅಲ್ ಕಾಯ್ದಾದ ೨ ಶಂಕಿತ ಭಯೋತ್ಪಾದಕರ ಬಂಧನ

ಅಕ್ಬರ್ ಅಲಿ ಮತ್ತು ಅಬೂಲ್ ಕಲಾಂ ಆಜಾದ್

ಗೌಹಾಟಿ (ಅಸ್ಸಾಂ) – ಅಸ್ಸಾಂನ ಬಾರಪೆಟಾ ಜಿಲ್ಲೆಯಲ್ಲಿ ಮತ್ತೆ ೨ ಭಯೋತ್ಪಾದಕರನ್ನು ಇತ್ತಿಚೆಗೆ ಬಂಧಿಸಲಾಗಿದೆ. ಈ ಭಯೋತ್ಪಾದಕರು ‘ಅಲ್ ಕಾಯ್ದಾ’ ಈ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿದೆ, ಎಂದು ಬಾರಪೆಟಾದ ಪೊಲೀಸ ಅಧಿಕಾರಿ ಅಮಿತಾವ ಸಿಂಹ ಇವರು ಮಾಹಿತಿ ನೀಡಿದರು. ಬಾರಪೆಟಾದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಒಂದು ಮದರಸಾದ ಜೊತೆ ಈ ಭಯೋತ್ಪಾದಕರ ಸಂಬಂಧ ಇದೆ. ಈ ಭಯೋತ್ಪಾದಕರ ಗುರುತು ಪತ್ತೆ ಹಚ್ಚಲಾಗಿದ್ದು ಒಬ್ಬನ ಹೆಸರು ಅಕ್ಬರ್ ಅಲಿ ಮತ್ತು ಇನ್ನೊಬ್ಬನ ಹೆಸರು ಅಬೂಲ್ ಕಲಾಂ ಆಜಾದ್ ಆಗಿದೆ ಪೊಲೀಸರು ಹೇಳಿದರು.

೧೦ ದಿನದಲ್ಲಿ ೬ ಭಯೋತ್ಪಾದಕರ ಬಂಧನ

ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಇರುವ ಪ್ರಕರಣದಲ್ಲಿ ಅಸ್ಸಾಂ ಪೋಲೀಸರು ಕಳೆದ ೧೦ ದಿನದಲ್ಲಿ ೬ ಜನರನ್ನು ಬಂಧಿಸಿದ್ದಾರೆ. ಈ ಮೊದಲು ಗೋಲಪಾರಾ ಜಿಲ್ಲೆಯಿಂದ ೪ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ೨ ದಿನಗಳ ಹಿಂದೆ ಅಸ್ಸಾಂ ಪೋಲೀಸರು ಗೋಲಪಾರಾ ಜಿಲ್ಲೆಯಲ್ಲಿ ಹಾಫಿಜೂರ ರಹಮಾನ್ ಮುಫ್ತಿ ಎಂಬ ಮದರಸದ ಮೌಲವಿಯನ್ನು (ಇಸ್ಲಾಮಿನ ಧಾರ್ಮಿಕ ನಾಯಕ) ಬಂಧಿಸಿದ್ದರು. ಕೆಲವು ದಿನಗಳ ಹಿಂದೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ಇವರು ಗ್ರಾಮದಲ್ಲಿ ಅಪರಿಚಿತ ಇಮಾಮ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಬಂದರೆ ಅದರ ಮಾಹಿತಿ ಪೊಲೀಸರಿಗೆ ನೀಡಲು ಕರೆ ನೀಡಿದ್ದರು.

ಸಂಪಾದಕೀಯ ನಿಲುವು

ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಯೋತ್ಪಾದಕರನ್ನು ಬಂಧಿಸಲಾಗುತ್ತಿದೆ. ಗಡಿ ಭಾಗದ ರಾಜ್ಯಗಳಲ್ಲಿ ಈ ರೀತಿಯ ಭಯೋತ್ಪಾದಕರು ಪತ್ತೆಯಾಗುವುದು, ಇದು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಆಗಿದೆ !