ಕಮ್ಯುನಿಸ್ಟ್ ಸರಕಾರ ಎಲ್ಲಾ ಕಡೆಯ ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ !

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಇವರ ಹೇಳಿಕೆ !

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಇವರ ಒಂದು ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಅವರು, ‘ಕಮ್ಯುನಿಸ್ಟ್ ಸರಕಾರವು ಹಿಂದೂಗಳ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ.’ ಇಂದೂ ಮಲ್ಹೋತ್ರ ಮತ್ತು ಈಗಿನ ಮುಖ್ಯ ನ್ಯಾಯಾಧೀಶ ಉದಯ ಲಳಿತ ಇವರು ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸಂಬಂಧ ಪಟ್ಟ ಒಂದು ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದರು. ಈ ವಿಡಿಯೋದಿಂದ ಕಮ್ಯುನಿಸ್ಟ್‌ರ, ‘ಪ್ರಕರಣಗಳು ಅವರ ಹತ್ತಿರ ಹೋದರೆ ಅವರು ಹೇಗೆ ಪಕ್ಷಪಾತ ಮಾಡುವರು?’, ಎಂದು ಟೀಕಿಸಿದ್ದಾರೆ. ಆದರೆ ಅನೇಕರು ಅವರ ಧೈರ್ಯದ ಬಗ್ಗೆ ಶ್ಲಾಘಿಸುತ್ತಿದ್ದಾರೆ.

ಕಮ್ಯುನಿಸ್ಟ್ ಸರಕಾರಗಳು ಕೇವಲ ತೆರೆಗೆ ವಸೂಲಿಗಾಗಿ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆಯಲು ಆಶಿಸುತ್ತಿದೆ !

ಇಂದೂ ಮಲ್ಹೋತ್ರ ಇವರು ಈ ವಿಡಿಯೋದಲ್ಲಿ, ಈ ಕಮ್ಯುನಿಸ್ಟ್ ಸರಕಾರದ ಜೊತೆಗೆ ಹೀಗೆ ಆಗಬೇಕು, ಇವರು ಕಟ್ಟಿರುವ ತೆರಿಗೆಯನ್ನು ಲಪಟಾಯಿಸಲು ನೋಡುತ್ತಿದ್ದಾರೆ. ಅವರು ಕೇವಲ ತೆರಿಗೆಯಿಂದ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆಯಲು ಬಯಸಿದ್ದಾರೆ. ಅವರು ಎಲ್ಲಾ ಕಡೆ ನಿಯಂತ್ರಣ ಪಡೆದಿದ್ದಾರೆ. ಅದರಲ್ಲಿ ಕೂಡ ಕೇವಲ ಹಿಂದೂಗಳ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ. ಆದ್ದರಿಂದಲೇ ನ್ಯಾಯಮೂರ್ತಿ ಲಳಿತ ಮತ್ತು ನಾನು ಅದನ್ನು ಈ ರೀತಿ ಮಾಡುವುದರಿಂದ ತಡೆದಿದ್ದೇವು ಎಂದು ಹೇಳಿದ್ದಾರೆ.

ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸಂಬಂಧಿತ ಐತಿಹಾಸಿಕ ನಿರ್ಣಯ

ಇಂದೂ ಮಲ್ಹೋತ್ರ ಯಾವ ನಿರ್ಣಯದ ಬಗ್ಗೆ ಹೇಳುತ್ತಿದ್ದಾರೆ ಅದು ಜುಲೈ ೧೩, ೨೦೨೦ ರಲ್ಲಿ ‘ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮತ್ತು ಆಸ್ತಿಯ ಅಧಿಕಾರ’ ಇದರ ಬಗ್ಗೆ ನೀಡಿದ್ದರು. ಅದರಲ್ಲಿ ನ್ಯಾಯಾಲಯವು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರ ತ್ರಾವಣಕೊರ ರಾಜಮನೆತನದ ಹತ್ತಿರ ಶಾಶ್ವತವಾಗಿ ಇರಿಸಿದ್ದರು.

ಯಾರು ಇಂದೂ ಮಲ್ಹೋತ್ರ ?

ಇಂದೂ ಮಲ್ಹೋತ್ರ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಮೊದಲ ನ್ಯಾಯವಾದಿ ಆಗಿದ್ದಾರೆ. ಅವರು ಕೇರಳದ ಶಬರಿಮಲೆ ದೇವಸ್ಥಾನದ ಬಗ್ಗೆ ನಿರ್ಣಯದಲ್ಲಿ ಏಕೈಕ ನ್ಯಾಯಮೂರ್ತಿಯಾಗಿದ್ದರು. ಅವರು ದೇವಸ್ಥಾನದಲ್ಲಿ ೧೦ ರಿಂದ ೫೦ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಅನುಮತಿಯ ಬದಲು ಧಾರ್ಮಿಕ ಪರಂಪರೆಯ ರಕ್ಷಣೆ ಮಾಡಲು ಸಮರ್ಥನೆ ನೀಡಿದ್ದರು.