ಸೌದಿ ಅರೇಬಿಯಾದ ಮೆಕ್ಕಾ ಮಶೀದಿಯ ಮಾಜಿ ಇಮಾಮನಿಗೆ ೧೦ ವರ್ಷಗಳ ಕಾರಾಗೃಹದ ಶಿಕ್ಷೆ

ಸರಕಾರದ ಸುಧಾರಣಾ ನೀತಿಯನ್ನು ವಿರೋಧಿಸಿದ ಪರಿಣಾಮ !

(ಇಮಾಮ ಎಂದರೆ ಮಶೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ)

ಮೆಕ್ಕಾ ಮಶೀದಿಯ ಮಾಜಿ ಪ್ರಮುಖ ಇಮಾಮ ಶೇಖ ಸಾಲೇಹ ಅಲ್ ತಾಲಿಬ

ರಿಯಾಧ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದ ಒಂದು ನ್ಯಾಯಾಲಯವು ಮೆಕ್ಕಾ ಮಶೀದಿಯ ಮಾಜಿ ಪ್ರಮುಖ ಇಮಾಮ ಶೇಖ ಸಾಲೇಹ ಅಲ್ ತಾಲಿಬ ಇವನಿಗೆ ೧೦ ವರ್ಷಗಳ ಕಾರಾಗೃಹದ ಶಿಕ್ಷೆ ವಿಧಿಸಿದೆ. ೨೦೧೮ ರಲ್ಲಿ ಈ ಇಮಾಮನನ್ನು ಬಂಧಿಸಲಾಗಿತ್ತು. ಅವನು ಸೌದಿಯ ಮನೋರಂಜನ ಕ್ಷೇತ್ರವನ್ನು ನಿಯಂತ್ರಿಸುವ ಸಂಸ್ಥೆ ‘ಜನರಲ್ ಎಂಟರಟೇಮೆಂಟ್ ಅಥಾರಿಟಿ’ಯನ್ನು ಟೀಕಿಸಿದ್ದರಿಂದ ಅವನನ್ನು ಬಂಧಿಸಲಾಗಿತ್ತು. ಅವನು ಸಂಗೀತ ಕಾರ್ಯಕ್ರಮವನ್ನು ವಿರೋಧಿಸಿದ್ದನು.

ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ ಬಿನ್ ಸಲಮಾನ ಸಧ್ಯಕ್ಕೆ ತಮ್ಮ ದೇಶದಲ್ಲಿ ಸುಧಾರಣಾ ನೀತಿಯನ್ನು ಜಾರಿಗೊಳಿಸುತ್ತಿದ್ದಾರೆ. ಅದಕ್ಕೆ ಕಟ್ಟರವಾದಿ ಮೌಲ್ವಿ ಮತ್ತು ಇಮಾಮ ವಿರೋಧಿಸುತ್ತಿದ್ದಾರೆ. ಇಂತಹವರ ಮೇಲೆ ಕ್ರಮ ಕೈಕೊಂಡು ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತಿದೆ. ಅಂತಹವರಲ್ಲಿ ತಾಲಿಬ ಒಬ್ಬನಾಗಿದ್ದಾನೆ.