ಅಮೇರಿಕಾದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಲಾದ ಮೆರವಣಿಗೆಯಲ್ಲಿ ಬುಲ್ಡೋಜರ್ ತಂದಿದ್ದರಿಂದ ವಿವಾದ

ನ್ಯೂ ಜರ್ಸಿ(ಅಮೇರಿಕಾ) – ಅಮೇರಿಕಾದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಲದ ಮೆರವಣಿಗೆಯಲ್ಲಿ ಬುಲ್ಡೋಜರಅನ್ನು ಉಪಯೋಗಿಸಿದ್ದರಿಂದ ವಿವಾದ ನಿರ್ಮಾಣವಾಗಿದೆ. ಮೆರವಣಿಗೆಯಲ್ಲಿ ಬುಲ್ಡೋಜರ್ ತಂದಿರುವ ‘ಇಂಡಿಯನ್ ಬಿಜಿನೆಸ್ ಅಸೋಸಿಯೇಷನ್’ನ ವಿರುದ್ಧ ನ್ಯೂ ಜರ್ಸಿ ನಗರ ಪಾಲಿಕೆಯಲ್ಲಿ ದೂರು ದಾಖಲಿಸಲಾಗಿದೆ. ಹಾಗೂ ಈ ಪ್ರಕರಣದಲ್ಲಿ ‘ಇಂಡಿಯನ್ ಬಿಸಿನೆಸ್ ಅಸೋಸಿಯೇಷನ್’ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿದೆ.

೧. ‘ಇಂಡಿಯನ್ ಬಿಸಿನೆಸ್ ಅಸೋಸಿಯೇಷನ್’ ನ ಅಧ್ಯಕ್ಷ ಚಂದ್ರಕಾಂತ ಪಟೇಲ್ ಇವರು ‘ಸಂಘಟನೆ ಕ್ಷಮೆಯಾಚಿಸುವುದಿಲ್ಲ; ಕಾರಣ ನಾವು ಯಾವುದೇ ತಪ್ಪು ಮಾಡಿಲ್ಲ. ಇದು ಪೂರ್ವಗ್ರಹ ಪೀಡಿತ ದೂರಾಗಿದೆ’, ಎಂದು ಹೇಳಿದೆ. ‘ಬುಲ್ಡೋಜರ್ ಕೇವಲ ಸರಕಾರಿ ಭೂಮಿಯಲ್ಲಿ ಕಾನೂನು ಬಾಹಿರ ಕಟ್ಟಡಗಳನ್ನು ನೆಲೆಸಮ ಮಾಡುವುದರ ಪ್ರತಿನಿಧಿತ್ವ ಮಾಡುತ್ತದೆ’, ಎಂದು ಪಟೇಲ ಹೇಳಿದರು. ಈ ಬುಲ್ಡೋಜರ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಫಲಕ ಹಚ್ಚಲಾಗಿತ್ತು.

೨. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅಧಿಕಾರಕ್ಕೆ ಬಂದ ನಂತರ ಗಲಭೆಕೋರರು ಮತ್ತು ಲವ್ ಜಿಹಾದ್ ನಡೆಸುವ ಮುಸಲ್ಮಾನರ ಕಾನೂನು ಬಾಹಿರ ಕಟ್ಟಡಗಳನ್ನು ನೆಲೆಸಮ ಮಾಡಲು ಬುಲ್ಡೋಜರ್ ಉಪಯೋಗಿಸಿದರು. ಗಲಭೆ ಮತ್ತು ಲವ್ ಜಿಹಾದ್ ತಡೆಯುವುದಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಯೋಗಿ ಆದಿತ್ಯನಾಥ್ ಇವರನ್ನು ‘ಬಾಬಾ ಬುಲ್ಡೋಜರ್’ ಎಂದು ಕರೆಯುತ್ತಾರೆ.

೩. ‘ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್, ‘ಕೌನ್ಸಿಲ್ ಫಾರ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ’ ಮತ್ತು ‘ಹಿಂದೂ ಫಾರ್ ಹ್ಯೂಮನ್ ರೈಟ್ಸ್’ ನಂತಹ ಸಂಘಟನೆಗಳು ‘ಇಂಡಿಯನ್ ಬಿಜಿನೆಸ್ ಅಸೋಸಿಯೇಷನ್’ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. (ಭಾರತದಲ್ಲಿ ಮತಾಂಧರ ಚಟುವಟಿಕೆಗಳನ್ನು ತಡೆಯುವುದಕ್ಕೆ ‘ಬುಲ್ಡೋಜರ್’ ಇದು ಪ್ರತಿಕಾತ್ಮಕವೆಂದು ಉಪಯೋಗಿಸಲಾಗುತ್ತದೆ. ಆದ್ದರಿಂದ ಅಮೇರಿಕಾದಲ್ಲಿನ ಮತಾಂಧ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆ ಇವರಿಗೆ ಹೊಟ್ಟೆಯುರಿ ಬಂದಿದೆ ಇದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)