ಪ್ರಧಾನಿ ಮೋದಿ ಇವರ ಗುಜರಾತ ಪ್ರವಾಸದ ಮೊದಲು ಭೂಜನಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ

ಭೂಜ (ಗುಜರಾತ) – ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಗುಜರಾತ ಪ್ರವಾಸದಲ್ಲಿದ್ದಾರೆ. ಅವರ ಪ್ರವಾಸದ ಮೊದಲೇ ಗುಜರಾತ್‌ನ ಕಚ್ಛ ಜಿಲ್ಲೆಯ ಭೂಜನಲ್ಲಿ ಧಾರ್ಮಿಕ ಘರ್ಷಣೆ ಭುಗಿಲೆದ್ದಿದೆ. ಭೂಜನಲ್ಲಿ ಒಬ್ಬ ಸ್ಥಳೀಯ ವ್ಯಕ್ತಿಯ ಕೊಲೆ ಮಾಡಿದ್ದರಿಂದ ಎರಡು ಗುಂಪಿನಲ್ಲಿ ಘರ್ಷಣೆ ನಡೆದಿದೆ. ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಪೊಲೀಸರ ಪಡೆ ಘಟನಾ ಸ್ಥಳಕ್ಕೆ ತಲುಪಿ ಅಲ್ಲಿಯ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಸಾರ ಮಾಧ್ಯಮಗಳ ವಾರ್ತೆಯ ಪ್ರಕಾರ ಭೂಜನಲ್ಲಿ ಮಾಧಾಪುರ ಪ್ರದೇಶದಲ್ಲಿ ಹಾಲು ಮಾರುವ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಘಟನೆಯ ಮಾಹಿತಿ ದೊರೆಯುತ್ತಲೇ ಆಕ್ರೋಶ ಗೊಮಡ ಜನರ ಗುಂಪು ರಸ್ತೆಗೆ ಇಳಿದು ಮಸೀದಿ ಮತ್ತು ಅಂಗಡಿಗಳು ನಾಶಗೊಳಿಸಿದ್ದಾರೆ. ಮಾಧಾಪುರದ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕೆ ಹಿರಿಯ ಅಧಿಕಾರಿಗಳ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಪೊಲೀಸರು ಜನರಿಗೆ ಶಾಂತಿ ಕಾಪಾಡಲು ಮತ್ತು ಗಾಳಿ ಸುದ್ದಿಗಳ ಮೇಲೆ ವಿಶ್ವಾಸ ಇಡದಿರಲು ಕರೆ ನೀಡಿದ್ದಾರೆ.